Advertisement
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಹಾಗೂ ಶಾಶ್ವತ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಬಿಜೆಪಿಯ ಬೈಂದೂರಿನ ಮಾಜಿ ಶಾಸಕ ಸುಕುಮಾರ್ ಶೆಟ್ಟಿ, ಜೆಡಿಎಸ್‌ನ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರನ್ನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷದ ಧ್ವಜ ನೀಡಿ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
Related Articles
Advertisement
ಕಹಿ ನೆನಪುಗಳನ್ನು ಬಿಟ್ಟು ಸಿಹಿ ನೆನಪುಗಳ ಜತೆಗೆ ಹೋಗಬೇಕು ಎಂದು ಬಂದಿದ್ದೇನೆ. ಯಾರಿಗೆ ಟಿಕೆಟ್ ಕೊಡುತ್ತೀರೋ ಅವರನ್ನು ನಾವು ಗೆಲ್ಲಿಸಿಕೊಂಡು ಬರುತ್ತೇವೆ. ಸರಕಾರದ ಗ್ಯಾರಂಟಿ ಯೋಜನೆ ಮನೆ ಮನೆಗೆ ಹೋಗಿ ತಲುಪಿಸುವ ಕೆಲಸ ಆಗಬೇಕು. ಹಿಂದಿನ ನಮ್ಮ ಕೆಲಸ ಕಾರ್ಯಗಳನ್ನು ಯುವಜನರಿಗೆ ಹೇಳಿದರೆ ಖಂಡಿತ ಮತ್ತೆ ನಾವು ಕರಾವಳಿ ಭಾಗದಲ್ಲಿ ಅಧಿಕಾರ ಹಿಡಿಯಬಹುದು.-ಜಯಪ್ರಕಾಶ್ ಹೆಗ್ಡೆ ಬೈಂದೂರಿನಲ್ಲಿ ಮನೆ ಮನೆಗೆ ಹೋಗಿ ಬಿ.ವೈ. ರಾಘವೇಂದ್ರ ಅವರಿಗೆ 25 ಸಾವಿರ ಲೀಡ್ ಕೊಡುವಂತೆ ಮಾಡಿದೆ. ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲಬೇಕಾದರೆ, ಬೈಂದೂರಿನಲ್ಲಿ ಆ ಪಕ್ಷಕ್ಕೆ ಮತ ಬೀಳಬೇಕು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಮ್ಮದು ಪ್ರಾಮಾಣಿಕ ಗರ್ಭಗುಡಿ, ಅವರದ್ದು (ಬಿಜೆಪಿ) ಡೂಪ್ಲಿಕೇಟ್ ಗರ್ಭಗುಡಿ.
-ಸುಕುಮಾರ ಶೆಟ್ಟಿ ಕಾಂಗ್ರೆಸ್‌ಗೆ ಹೋಗಬೇಡಿ, ಸರಕಾರ ಬೀಳುತ್ತದೆ ಎಂದು ಕೆಲವರು ಹೇಳಿದರು. ಆದರೆ ಯಾಕೆ ಬೀಳುತ್ತದೆ ಅಂತ ನಾನು ಇಲ್ಲಿಗೆ ಬಂದಿದ್ದೇನೆ. ಸಂವಿಧಾನ ಉಳಿಸಬೇಕು. ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿಗೆ ಬುದ್ಧಿ ಕಲಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ಅದು ಪುನರಾವರ್ತನೆ ಆಗಲಿದೆ.
-ಎಂ.ಪಿ. ಕುಮಾರಸ್ವಾಮಿ