Advertisement

ಸ್ಲೀಪರ್‌ ಬಸ್‌ಗಳಲ್ಲಿ ಪರದೆ ತೆಗೆಯಲು ಜಯಮಾಲ ಒತ್ತಾಯ

09:00 AM Nov 18, 2017 | |

ವಿಧಾನಪರಿಷತ್ತು: “ಸರ್ಕಾರಿ ಹಾಗೂ ಖಾಸಗಿ ಸ್ಲೀಪರ್‌ ಬಸ್‌ಗಳಲ್ಲಿ ಅಳವಡಿಸಿರುವ ಪರದೆಗಳು ವ್ಯಾಪಕವಾಗಿ 
ದುರ್ಬಳಕೆಯಾಗುತ್ತಿದ್ದು, ಅಂತಹ ಬಸ್‌ಗಳಲ್ಲಿ ಹೆಣ್ಣು ಮಕ್ಕಳ ಅಕ್ರಮ ಸಾಗಾಟ, ಅನೈತಿಕ ಚಟುವಟಿಕೆಗಳು ನಡೆಯುತ್ತವೆ’
ಎಂದು ಕಾಂಗ್ರೆಸ್‌ ಸದಸ್ಯೆ ಡಾ.ಜಯಾಮಾಲ ಆರೋಪಿಸಿದ ಪ್ರಸಂಗ ಶುಕ್ರವಾರ ನಡೆಯಿತು.

Advertisement

ಈ ಆರೋಪ ಸಾರಿಗೆ ಸಚಿವ ಎಚ್‌. ಎಂ. ರೇವಣ್ಣ ಹಾಗೂ ಜಯಾಮಾಲ ನಡುವೆ ವಾಗ್ವಾದಕ್ಕೂ ಕಾರಣವಾಯಿತು.
ಅಂತಹ ಪ್ರಕರಣಗಳು ವರದಿಯಾಗಿಲ್ಲ ನಿರ್ದಿಷ್ಟ ಪ್ರಕರಣಗಳ ಬಗ್ಗೆ ತಿಳಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರೇವಣ್ಣ ಉತ್ತರಿಸಿದರು. “ಈ ಬಗ್ಗೆ ಸರ್ಕಾರಕ್ಕೆ ವಿವರವಾದ ವರದಿ ಕೊಡಲಾಗಿದೆ. ವರದಿ ಓದಿಕೊಳ್ಳಿ ಎಂದು ಜಯಮಾಲ’ ಪ್ರತ್ಯುತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಸ್‌ಗಳಲ್ಲಿ ಪ್ರಯಾಣ ಮಾಡುವವರೆಲ್ಲರನ್ನೂ ಸಂಶಯದಿಂದ ನೋಡಲು ಆಗುವುದಿಲ್ಲ ಎಂದಾಗ, ಸ್ಲೀಪರ್‌ ಬಸ್‌ಗಳ ಕೊನೆಯ ಸೀಟುಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ನಮಗೆ ಪ್ರಯಾಣಿಸಲು ಮುಜುಗರವಾಗುತ್ತದೆ ಎಂದು ಅನೇಕ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಹಾಗಾಗಿ, ಬಸ್‌ಗಳಲ್ಲಿ ಸಿಸಿಟಿವಿ ಅಳವಡಿಸಬೇಕು, ಪರದೆ ತೆಗೆದುಹಾಕಬೇಕು ಎಂದು ಜಯಮಾಲ ಸಲಹೆ ನೀಡಿದರು.

ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಸೀಟು ಮುಂಗಡ ಕಾಯ್ದಿರಿಸುವಾಗ ಮಹಿಳೆಯರಿಗೆ ಸಿಂಗಲ್‌ ಸೀಟಿಗೆ ಆದ್ಯತೆ ನೀಡಲಾಗುತ್ತದೆ. ಡಬಲ್‌ ಬರ್ತ್‌ನಲ್ಲಿ ಒಂದು ಸೀಟಿನಲ್ಲಿ ಮಹಿಳೆ ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದರೆ ಇನ್ನೊಂದು ಸೀಟು ಪುರಷರು ಕಾಯ್ದಿರಿಸದಂತೆ ಬ್ಲಾಕ್‌ ಮಾಡಲಾಗುತ್ತದೆ. ಒಂಟಿ ಮಹಿಳೆಯರು ಪ್ರಯಾಣದಲ್ಲಿ ಇದು ಅಸಾಧ್ಯ. ಪತಿ-ಪತ್ನಿ ಪ್ರಯಾಣಿಸುವಾಗ ಅವರೇ ದಂಪತಿಗಳು ಹೌದೋ, ಅಲ್ಲವೋ ಅನ್ನುವುದನ್ನು ಹೇಗೆ ಪತ್ತೆ ಹಚ್ಚುವುದು ಎಂದು ಜಯಮಾಲ ಸಲಹೆ ಕೊಟ್ಟರೆ ಆದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರೇವಣ್ಣ ಹೇಳಿದರು. “ಇದೊಂದು ಉಡಾಫೆ ಉತ್ತರ’ ಎಂದು ಹೇಳುತ್ತಾ ಜಯಮಾಲ ಆಸನದಲ್ಲಿ ಕುಳಿತುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next