Advertisement
ಮಹಿಳೆಯರಿಗೆ ನೈತಿಕ,ಆತ್ಮಸ್ಥೈರ್ಯ ತುಂಬಿದ ತೀರ್ಪು: ಜಯಮಾಲಾಸುಪ್ರೀಂಕೋರ್ಟ್ ತೀರ್ಪಿಗೆ ಏನನಿಸುತ್ತದೆ?
ನ್ಯಾಯಾಂಗ, ಸಂವಿಧಾನ, ನಂಬಿಕೆ ಎಂಬುದು ಸತ್ಯ. ಆ ಸತ್ಯವೇ ದೇವರು. ಇಡೀ ದೇಶದ ಮಹಿಳೆಯರಿಗೆ ಸುಪ್ರೀಂಕೋರ್ಟ್‌ನಿಂದ ಜಯ ಸಿಕ್ಕಿದೆ. ಇದು ಕೇವಲ ಶಬರಿಮಲೆ ಪ್ರವೇಶದ ತೀರ್ಪು ಆಗಿರಬಹುದು. ಆದರೆ, ಇಂತಹ ತೀರ್ಪು ಮಹಿಳಾ ಸಮುದಾಯಕ್ಕೆ ನೈತಿಕ ಹಾಗೂ ಆತ್ಮಸ್ಥೈರ್ಯ ತುಂಬುತ್ತದೆ.
ಹೌದು, ಹಿಂದೆ ಆದ ಘಟನೆಯಿಂದ ನೋವಾಗಿತ್ತು. ನನಗಷ್ಟೇ ಅಲ್ಲ ಇಡೀ ಹೆಣ್ಣುಕುಲಕ್ಕೆ ನೋವಾಗಿತ್ತು. ಈಗ ಸುಪ್ರೀಂಕೋರ್ಟ್ ಎಲ್ಲ ನೋವು ಮರೆಸಿದೆ. ಹಿಂದಿನದು ಈಗ ನಾನು ನೆನಪಿಸಿಕೊಳ್ಳಲು ಬಯಸುವುದಿಲ್ಲ. ಇಂತದ್ದೊಂದು ತೀರ್ಪು ಬರುವ ವಿಶ್ವಾಸವಿತ್ತಾ?
ಖಂಡಿತಾ, ಈ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಅಪಾರ ನಂಬಿಕೆ ಇತ್ತು. ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ನ್ಯಾಯಾಲಯ ಒಂದಲ್ಲ ಒಂದು ದಿನ ಇಂತಹ ತೀರ್ಪು ಕೊಟ್ಟೇ ಕೊಡುತ್ತದೆ ಎಂಬ ವಿಶ್ವಾಸವಿತ್ತು. ಹೀಗಾಗಿ, ಸುಪ್ರೀಂಕೊರ್ಟ್ ನೀಡಿರುವುದು ಐತಿಹಾಸಿಕ ತೀರ್ಪು. ಇದಕ್ಕಿಂತ ಸಂತೋಷ ಬೇರೊಂದಿಲ್ಲ. ಅಂಬೇಡ್ಕರ್ ಕೊಟ್ಟ ಸಂವಿಧಾನದಕ್ಕೆ ನಾವು ಚಿರ ಋಣಿ. ದೇಶದ ಹೆಣ್ಣು ಮಕ್ಕಳಿಗೊಂದು ನ್ಯಾಯ ಸಿಕ್ಕಿದೆ. ಮಹಿಳೆ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾಳೆ, . ಲಿಂಗ ತಾರತಮ್ಯ ಬೇಡ, ಆಕೆಗೂ ಸಮಾನ ಹಕ್ಕು ಸಿಗಬೇಕು ಎಂಬುದೇ ನಮ್ಮೆಲ್ಲರ ಆಶಯ.
Related Articles
ನ್ಯಾಯಾಲಯದ ತೀರ್ಪು ಎಲ್ಲರೂ ಸಮಾನರು. ಪುರುಷರಷ್ಟೇ ಮಹಿಳೆಯರು ಸಮಾನರು ಎಂದು ಹೇಳಿದೆ. ಇದನ್ನು ಎಲ್ಲರೂ ಮುಕ್ತವಾಗಿ ಸ್ವಾಗತಿಸಿ. ಹೆಣ್ಣನ್ನು ಗೌರವಿಸಿ. ದೇವಾಲಯ ಸೇರಿ ಯಾವುದೇ ಪುಣ್ಯ ಕ್ಷೇತ್ರವಿರಲಿ ಅಲ್ಲಿ ಮಹಿಳೆಗೂ ಮುಕ್ತ ಅವಕಾಶ ಇರಲಿ.
Advertisement
ಸುಪ್ರೀಂಕೋರ್ಟ್ ತೀರ್ಪಿಗೆ ಕೆಲವರ ವಿರೋಧ ಇದೆಯಲ್ಲಾ?ವಿರೋಧ ಸಲ್ಲ. ಮಹಿಳೆಯರಿಗೆ ಅವಕಾಶ ಎಂದಾಕ್ಷಣ ಎಲ್ಲರೂ ಹೋಗುವುದಿಲ್ಲ. ನಾವು ದೇವರನ್ನು ನೋಡಲು ಆವಕಾಶ ಕೇಳಿದ್ದೇವೆ. ಮುತ್ತಿಗೆ ಹಾಕಲು ಅಲ್ಲ. ನ್ಯಾಯಾಲಯ ಅವಕಾಶ ಕೊಟ್ಟಿದೆ. ಭಗವಂತನನ್ನು ಕಣ್ಮುಂಬಿಕೊಳ್ಳಲು ಬಯಸುವವರು ಹೋಗಲಿ. ನಮ್ಮ ಧಾರ್ಮಿಕ ಪ್ರವೃತ್ತಿ ಬಗ್ಗೆ ಕಡುಬಡವರ ಮನೆಯಲ್ಲೂ ಪ್ರತಿಯೊಬ್ಬ ತಾಯಿ ದೇವಾಲಯಕ್ಕೆ ಹೇಗೆ ಹೋಗಬೇಕು ಎಂಬುದನ್ನು ಹೆಣ್ಣು ಮಕ್ಕಳಿಗೆ ಹೇಳಿಕೊಟ್ಟಿರುತ್ತಾಳೆ. ಹೀಗಾಗಿ, ಯಾರಿಗೂ ಯಾವುದೇ ಆತಂಕ ಬೇಕಿಲ್ಲ. ರಾಜ್ಯದಲ್ಲಿ ಮಹಿಳಾ ಭಕ್ತರು ಶಬರಿಮಲೆಗೆ ಹೋಗಲು ಬಯಸಿದರೆ ಸರ್ಕಾರದಿಂದ ನೆರವು ಕಲ್ಪಿಸುತ್ತೀರಾ?
ರಾಜ್ಯ ಸರ್ಕಾರ ಶಬರಿಮಲೆಗೆ ಹೋಗುವ ಭಕ್ತರಿಗೆ ವೈದ್ಯಕೀಯ ನೆರವು ಸೇರಿದಂತೆ ಹಲವು ಸೌಕರ್ಯ ಒದಗಿಸುತ್ತಿದೆ. ಮಹಿಳಾ ಭಕ್ತರು ಹೋಗಬಹುದು. ಅಗತ್ಯ ಎನಿಸಿದರೆ ಮತ್ತಷ್ಟು ಸವಲತ್ತು ಒದಗಿಸಲಾಗುವುದು. ನಂಬಿಕೆ ಅವರವರಿಗೆ ಬಿಟ್ಟದ್ದು: ತೀರ್ಪಿಗೆ ವಿರೋಧ ಸಲ್ಲ: ಗಿರಿಜಾ ಲೋಕೇಶ್
ಸುಪ್ರೀಂಕೋರ್ಟ್ ತೀರ್ಪಿಗೆ ಏನನಿಸುತ್ತದೆ?
ನನಗಂತೂ ತುಂಬಾ ಖುಷಿಯಾಗಿದೆ. ನಾವೆಲ್ಲಾ ಯಾವ ಕಾಲದಲ್ಲಿದ್ದೇವೆ. ಮಹಿಳೆಯರು ದೇವಾಲಯ ಪ್ರವೇಶ ಮಾಡಬಾರದು ಎಂಬ ಯೋಚನೆಯೇ ಸರಿಯಲ್ಲ. ನೀವು ಹಿಂದೊಮ್ಮೆ ಶಬರಿಮಲೆಗೆ ಹೋಗಿದ್ದೀರಲ್ಲವೇ?
ಹೌದು, 1988 ರಲ್ಲಿ ನಾನು ಶಬರಿಮಲೆಗೆ ಹೋಗಿದ್ದೆ. ಆಗ ನನ್ನ ಮಗ ಸೃಜನ್‌ಗೆ 8 ವರ್ಷ, ಮಗಳು ಪವಿತ್ರಾಗೆ 12 ವರ್ಷ. ನಮ್ಮ ಅತ್ತೆಯವರು ನಮ್ಮ ಜತೆ ಬಂದಿದ್ದರು. ಅದೊಂದು ಅದ್ಭುತ ಪಯಣ. ರಾತ್ರಿ 10 ಗಂಟೆಯಲ್ಲಿ ಪೆರಿಯಾರ್ ಹುಲಿಸಂರಕ್ಷಿತ ಪ್ರದೇಶದಲ್ಲಿ ನಡೆದು ಹೋಗಿ ದೇವರ ದರ್ಶನ ಪಡೆದಿದ್ದೆವು. ಆಗ ನಿಮಗೆ ನಿರ್ಬಂಧ ಅಥವಾ ನಿಷೇಧ ಹೇರಿರಲ್ಲವೇ?
ಇಲ್ಲ. ನಾವು ಏಪ್ರಿಲ್ ತಿಂಗಳಲ್ಲಿ ಹೋಗಿದ್ದೆವು. ಅಲ್ಲಿನ ದೇವಾಲಯದವರು ಒಬ್ಬರು ನಮ್ಮನ್ನು ಕರೆದುಕೊಂಡು ಹೋಗಿದ್ದರು. ಇಬ್ಬರು ಮಕ್ಕಳಿಗೂ ಇರುಮುಡಿ ಕಟ್ಟಿಸಿದ್ದೆವು. ನೀವು ಅಯ್ಯಪ್ಪ ಸ್ವಾಮಿ ದರ್ಶನ ಮಾಡಲೆಂದೇ ಹೋಗಿದ್ದಿರಾ?
ಶಬರಿಮಲೆ, ಕರಿಮಲೆ, ಅಯ್ಯಪ್ಪ ದೇವಾಲಯ ಕಾಡಿನ ಮಧ್ಯೆ ಇರುವ ಬಗ್ಗೆ ಕೇಳಿದಾಗ ನನಗೆ ಆ ಪ್ರಕೃತಿ ನೋಡಬೇಕು ಎಂಬ ಆಸೆ ಉಂಟಾಯಿತು. ಡಾ.ರಾಜ್‌ಕುಮಾರ್, ರಜನೀಕಾಂತ್, ಆಮಿತಾಬ್ ಬಚ್ಚನ್ ಸೇರಿ ಚಿತ್ರರಂಗದ ದಿಗ್ಗಜರು ಹೋಗುತ್ತಿದ್ದರು. ನನಗೂ ಹೀಗಾಗಿ, ಒಮ್ಮೆ ನೋಡಬೇಕು ಎಂಬ ಆಸೆಯಾಯಿತು. ಅಲ್ಲಿ ಹೋದ ನಂತರ ನನಗೆ ಪ್ರಕೃತಿಯೇ ದೈವ ಸಮಾನ ಎಂಬ ನಂಬಿಕೆ ಬಂದಿತು. ದೇವರ ದರ್ಶನ ನಂತರ ಕೆಳಗೆ ಇಳಿದು ಪಂಪಾ ನದಿಯ ಬಳಿ ಕೆಲವೊತ್ತು ಕುಳಿತಾದ ಯಾವುದೇ ಕಾಲು ನೋವು ಇರಲಿಲ್ಲ. ಅದು ನನಗೆ ಆಶ್ಚರ್ಯ ಮೂಡಿಸಿತು. ಶಬರಿಮಲೆ ಪ್ರವೇಶಕ್ಕೆ ವಯಸ್ಸಿನ ನಿರ್ಬಂಧ ಬೇಕಾ?
ಬೇಕಿಲ್ಲ. ನಾನು 40 ವರ್ಷದ ವಯಸ್ಸಿನಲ್ಲಿ ಅಲ್ಲಿಗೆ ಹೋಗಿದ್ದೆ. ಈಗ 70 ವರ್ಷ. ನಾನು ಹೋಗಲು ಸಾಧ್ಯವೇ? ಒಂದೇ ಒಂದು ಮೆಟ್ಟಿಲು ಹತ್ತಲು ಸಹ ಆಗುವುದಿಲ್ಲ. ಶಬರಿಮಲೆ ಅಯ್ಯಪ್ಪ ನೋಡಲು ಯಾವುದೇ ವಯಸ್ಸಿನ ಮಿತಿ ಇರಬಾರದು. ಅದರಲ್ಲೂ ಅಲ್ಲಿನ ಪ್ರಕೃತಿ ನೋಡುವುದೇ ಒಂದು ಸೌಭಾಗ್ಯ. ಹೀಗಾಗಿ, ಎಲ್ಲೂ ಯಾವುದೇ ರೀತಿಯ ನಿರ್ಬಂಧ ಇರಕೂಡದು. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಕೆಲವರ ವಿರೋಧವೂ ಇದೆಯಲ್ಲಾ?
ಯಾರೂ ವಿರೋಧ ಮಾಡಬಾರದು. ನೋಡಿ, ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಎಂದಾಕ್ಷಣ ಹೇಗೆಂದರೆ ಹಾಗೆ ಯಾರೂ ಹೋಗುವುದಿಲ್ಲ. ಎಲ್ಲರೂ ಶುದ್ಧವಾಗಿಯೇ ಹೋಗುತ್ತಾರೆ. ಇಲ್ಲದಿದ್ದರೆ ಹೋಗುವುದೇ ಇಲ್ಲ. ದೇವರು ಎಲ್ಲರಿಗೂ ಒಂದೇ, ಜಾತಿ- ಬೇಧ ಇರಬಾರದು. ನಾನು ಮನೆಯಲ್ಲೇ ಎಲ್ಲ ದೇವರನ್ನೂ ಪೂಜಿಸುತ್ತೇನೆ. ಏಸು ಕ್ರಿಸ್ತನನ್ನೂ ಪ್ರಾರ್ಥಿಸುತ್ತೇನೆ. ನಂಬಿಕೆ ಅವರವರಿಗೆ ಬಿಟ್ಟದ್ದು. ಸಂದರ್ಶನ: ಎಸ್.ಲಕ್ಷ್ಮಿನಾರಾಯಣ