ಮುಂಬಯಿ : ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕುಟುಂಬಕ್ಕೆ ಅತ್ಯಂತ ನಿಕಟವರ್ತಿಗಳಾಗಿರುವ ರಾಜಕಾರಣಿ ಅಮರ್ ಸಿಂಗ್ ಅವರು, “ಅಮಿತಾಭ್ ಮತ್ತು ಜಯಾ ಜತೆಯಾಗಿ ಬಾಳುತ್ತಿಲ್ಲ; ಪ್ರತ್ಯೇಕವಾಗಿ ಬದುಕುತ್ತಿದ್ದಾರೆ’ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸುವ ಬಚ್ಚನ್ ಕುಟುಂಬದ ಮೇಲೆ ವಿವಾದದ ಬಾಂಬ್ ಎಸೆದಿದ್ದಾರೆ.
ರಾಜ್ಯ ಸಭೆಯ ಸದಸ್ಯರಾಗಿರುವ ಅಮರ್ ಸಿಂಗ್ ಅವರು ಮೂಲತಃ “ಎಬಿಪಿ ಮಜಾ’ ಗೆ ನೀಡಿದ್ದ ಸಂದರ್ಶನವನ್ನು ಉಲ್ಲೇಖೀಸಿ ಡಿಎನ್‌ಎ ವರದಿ ಮಾಡಿದ್ದು ಈ ನಂಬಲಸಾಧ್ಯ ವಿಷಯವನ್ನು ಅದು ಬಹಿರಂಗಪಡಿಸಿದೆ.
ಅಮರ್ ಸಿಂಗ್ ನೀಡಿರುವ ಸಂದರ್ಶನದಲ್ಲಿ ಮುಖ್ಯವಾಗಿ ಕಂಡುಬಂದಿರುವ ಅಂಶಗಳು ಹೀಗಿವೆ :
“ದೇಶದಲ್ಲಿನ ಯಾವುದೇ ಒಡಕಿಗೆ ನಾನೇ ಕಾರಣ ಎಂದು ಜನರು ಆರೋಪಿಸುತ್ತಾರೆ. ಅಂಬಾನಿ ಕುಟುಂಬ ಒಡೆದು ಹೋದಾಗ ಅಲ್ಲಿ ಮಹಾಭಾರತವನ್ನು ಸೃಷ್ಟಿಸಿದವನು ನಾನೇ ಎಂದು ನನ್ನನ್ನು ಬಿಂಬಿಸಲಾಗಿತ್ತು. ಆದರೆ ಹಾಗೆ ಮಾಡಿದವನು ನಾನಾಗಿರಲಿಲ್ಲ. ಬಚ್ಚನ್ ಕುಟುಂಬದ ಬಗ್ಗೆಯೂ ಜನರು ಇದೇ ಮಾತನ್ನು ಆಡಿದರು….’
Related Articles
“…..ಆದರೆ ನಾನು ಬಚ್ಚನ್ ಅವರನ್ನು ಭೇಟಿಯಾಗುವುದಕ್ಕೆ ಮುನ್ನವೇ ಜಯಾ ಮತ್ತು ಅಮಿತಾಭ್ ಪ್ರತ್ಯೇಕವಾಗಿ ಬಾಳುತ್ತಿದ್ದರು. ಇವರಲ್ಲಿ ಒಬ್ಬರು “ಪ್ರತೀಕ್ಷಾ’ದಲ್ಲಿ ವಾಸಿಸುತ್ತಿದ್ದರೆ ಇನ್ನೊಬ್ಬರು ಬಚ್ಚನ್ ಅವರ ಇನ್ನೊಂದು ಬಂಗಲೆಯಾಗಿರುವ “ಜನಕ್’ನಲ್ಲಿ ವಾಸಿಸುತ್ತಿದ್ದರು. ಈ ನಡುವೆ ಐಶ್ವಯಾ ರೈ ಬಚ್ಚನ್ ಮತ್ತು ಜಯಾ ಬಚ್ಚನ್ ನಡುವೆ ಕೆಲವೊಂದು ಸಮಸ್ಯೆಗಳಿವೆ ಎಂಬ ಊಹಾಪೋಹಗಳೂ ಇದ್ದವು. ಆದರೆ ಅದಕ್ಕೆಲ್ಲ ನಾನು ಕಾರಣನಲ್ಲ’ ಎಂದು ಅಮರ್ ಸಿಂಗ್ ತಮ್ಮ ವಿರುದ್ಧದ ಆಪಾದನೆಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾ ಹೇಳಿದರು.
ಇದೇ ವೇಳೆ ಅಮರ್ ಸಿಂಗ್ ಅವರು ಸಮಾಜವಾದಿ ಪಕ್ಷದಲ್ಲಿ ಮತ್ತು ಮುಲಾಯಂ ಸಿಂಗ್ ಯಾದವ್ ಕುಟುಂಬದಲ್ಲಿ ಒಡಕು ಸೃಷ್ಟಿಸಿರುವ ಆರೋಪಕ್ಕೂ ಗುರಿಯಾಗಿದ್ದಾರೆ.
ಅಂದ ಹಾಗೆ ಬಚ್ಚನ್ ಕುಟುಂಬದವರು ತಮ್ಮ ಖಾಸಗಿ ಬದುಕನ್ನು ಯಾವತ್ತೂ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ.
ಇದೀಗ ಅಮಿತಾಭ್ ಮತ್ತು ಜಯಾ ಬಚ್ಚನ್ ಪ್ರತ್ಯೇಕವಾಗಿ ಬಾಳುತ್ತಿದ್ದಾರೆ ಎಂದು ಅಮರ್ ಸಿಂಗ್ ಹಾಕಿರುವ ಬಾಂಬ್‌ಗ ಬಚ್ಚನ್ ದಂಪತಿ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಇನ್ನು ಕಾದು ನೋಡಬೇಕಾಗಿದೆ.