Advertisement

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ

05:31 PM May 10, 2024 | Team Udayavani |

ಮುಂಬೈ: ಬಿಸಿಸಿಐ ಎಚ್ಚರಿಕೆಯ ಹೊರತಾಗಿಯೂ ರಣಜಿ ಪಂದ್ಯಗಳನ್ನು ತಪ್ಪಿಸಿಕೊಂಡು ಬಳಿಕ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯಿಂದ ಹೊರಬಿದ್ದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಹತ್ವದ ಮಾಹಿತಿ ನೀಡಿದ್ದಾರೆ.

Advertisement

ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಪಟ್ಟಿಯಿಂದ ಹೊರಗಿಡುವುದು ಆಯ್ಕೆಗಾರರ ​​ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಮಾತ್ರ ತೆಗೆದುಕೊಂಡ ನಿರ್ಧಾರ ಎಂದು ಜಯ್ ಶಾ ಬಹಿರಂಗಪಡಿಸಿದ್ದಾರೆ. ಅಲ್ಲದೆ “ಯಾರೂ ಅನಿವಾರ್ಯವಲ್ಲ” ಎಂದೂ ಪ್ರತಿಪಾದಿಸಿದ್ದಾರೆ.

ಬಿಸಿಸಿಐನ ನಿರ್ದೇಶನದ ಹೊರತಾಗಿಯೂ ದೇಶೀಯ ಪಂದ್ಯಗಳಿಗೆ ಹಾಜರಾಗಲು ವಿಫಲರಾದ ನಂತರ ಕಿಶನ್ ಮತ್ತು ಅಯ್ಯರ್ ಅವರನ್ನು ಹೊರಗಿಡಲಾಗಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಮುಗಿದ ನಂತರ ಕಿಶನ್ ದೀರ್ಘ ವಿರಾಮಕ್ಕೆ ಹೋದರು ಮತ್ತು ಐಪಿಎಲ್ ವರೆಗೆ ಅಲಭ್ಯರಾಗಿದ್ದರು. ಬೆನ್ನು ನೋವಿನ ಕಾರಣದಿಂದ ಟೀಂ ಇಂಡಿಯಾ ಆಟ ತಪ್ಪಿಸಿಕೊಂಡಿದ್ದ ಅಯ್ಯರ್ ಅಂತಿಮವಾಗಿ ಮುಂಬೈಗಾಗಿ ರಣಜಿ ಟ್ರೋಫಿಯಲ್ಲಿ ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಕೆಲವು ಪಂದ್ಯಗಳಲ್ಲಿ ಕಾಣಿಸಿಕೊಂಡರು.

ಗುರುವಾರ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, “ನೀವು ಸಂವಿಧಾನವನ್ನು ಪರಿಶೀಲಿಸಬಹುದು. ನಾನು ಆಯ್ಕೆ ಸಭೆಯ ಸಂಚಾಲಕ. ಆ ನಿರ್ಧಾರವು ಅಜಿತ್ ಅಗರ್ಕರ್ ಅವರದ್ದಾಗಿದೆ, ಈ ಇಬ್ಬರು ಆಟಗಾರರು (ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್) ದೇಶೀಯ ಕ್ರಿಕೆಟ್ ಆಡದಿದ್ದರೂ, ಅವರನ್ನು ಕೇಂದ್ರ ಒಪ್ಪಂದಗಳ ಪಟ್ಟಿಯಿಂದ ಕೈಬಿಡುವ ನಿರ್ಧಾರ ಅವರದ್ದಾಗಿತ್ತು” ಎಂದರು.

“ನನ್ನ ಪಾತ್ರವನ್ನು ಕಾರ್ಯಗತಗೊಳಿಸುವುದು. ನಾವು ಸಂಜು ಸ್ಯಾಮ್ಸನ್ ನಂತಹ ಹೊಸ ಆಟಗಾರರನ್ನು ಗುತ್ತಿಗೆಗೆ ಸೇರಿಸಿದ್ದೇವೆ. ಯಾರೂ ಅನಿವಾರ್ಯವಲ್ಲ” ಎಂದು ಶಾ ಹೇಳಿದರು.

Advertisement

ಭಾರತೀಯ ಆಟಗಾರರು ದೇಶೀಯ ಕ್ರಿಕೆಟ್‌ಗೆ ಆದ್ಯತೆ ನೀಡಬೇಕು ಎಂಬ ಮಂಡಳಿಯ ನಿಲುವನ್ನು ಶಾ ಪುನರುಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next