Advertisement

ಶಾರುಖ್‌ ಜತೆ ʼಜವಾನ್‌ʼ ನಲ್ಲಿ ಶಿವರಾಜ್‌ ಕುಮಾರ್‌ ನಟನೆ? ಹೆಚ್ಚಾಯಿತು ಶಿವಣ್ಣನ ಬೇಡಿಕೆ

03:38 PM Mar 06, 2023 | Team Udayavani |

ಬೆಂಗಳೂರು: ಶಾರುಖ್‌ ಖಾನ್‌ ʼಪಠಾಣ್‌ʼ ಸಿನಿಮಾ ಅತೀ ಹೆಚ್ಚು ಗಳಿಕೆ ಕಂಡ ಬಾಲಿವುಡ್‌ ಸಿನಿಮಾ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಥಿಯೇಟರ್‌ ನಿಂದ ಪಠಾಣ್‌ ಫೀವರ್‌ ಇನ್ನು ಕಮ್ಮಿಯಾಗಿಲ್ಲ. ಈ ನಡುವೆಯೇ ಶಾರುಖ್‌ ಅವರ ಮುಂದಿನ ಸಿನಿಮಾದ ಬಗ್ಗೆ ಹೈಪ್‌ ಶುರುವಾಗಿದೆ.

Advertisement

ಅಟ್ಲೀ ನಿರ್ದೇಶನದ ʼಜವಾನ್‌ʼ ಸಿನಿಮಾ ಶಾರುಖ್‌ ಕೆರಿಯರ್‌ ನಲ್ಲಿ ಮತ್ತೊಂದು ಹೊಸ ಬಗೆಯ ದಾಖಲೆಯನ್ನು ಬರೆಯುವ ನಿರೀಕ್ಷಯಿದೆ. ಇದೊಂದು ಪಕ್ಕಾ ಮಾಸ್‌ ಮಸಾಲ ಸಿನಿಮಾ ಎನ್ನುವುದುಪೋಸ್ಟರ್‌ ನಿಂದ ಗೊತ್ತಾಗುವ ಮೊದಲ ವಿಚಾರ. ಇತ್ತೀಚೆಗೆ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ನಟಿಸುತ್ತಾರೆ ಎನ್ನುವುದರ ಬಗ್ಗೆ ದೊಡ್ಡ ಮಟ್ಟದ ಗಾಸಿಪ್‌ ಹರಿದಾಡಿತ್ತು.  ಆ ಬಳಿಕ ಸ್ಟೈಲಿಸ್ಟ್‌ ಸ್ಟಾರ್‌ ನಟಿಸುತ್ತಿಲ್ಲ ಎನ್ನುವುದು ಅಧಿಕೃತವಾಗಿ ಮಾಹಿತಿ ಹೊರ ಬಿದ್ದಿದೆ.

ಇದನ್ನೂ ಓದಿ: ಕಮಿನ್ಸ್ ಅಲಭ್ಯತೆ ಮುಂದುವರಿಕೆ; ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಸ್ಟೀವ್ ಸ್ಮಿತ್ ನಾಯಕ

ಈ ಸುದ್ದಿ ಚರ್ಚೆಯಲ್ಲಿರುವಾಗಲೇ ಇದೀಗ ʼಜವಾನ್‌ʼ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ‌ ನಟಿಸಲು ಸೆಂಚುರಿ ಸ್ಟಾರ್‌, ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರನ್ನು ಚಿತ್ರ ತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಶಿವರಾಜ್‌ ಕುಮಾರ್‌ ಶಾರುಖ್‌ ಜೊತೆ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರ ಇಲ್ವೋ ಎನ್ನುವುದು ಮುಂದಿನ ದಿನದಲ್ಲಿ ಗೊತ್ತಾಗಲಿದೆ.

ಈಗಾಗಲೇ ಶಿವಣ್ಣ ರಜಿನಿಕಾಂತ್‌ ಅವರ ʼಜೈಲರ್‌ʼ ಹಾಗೂ ಧನುಷ್‌ ಅವರ ʼಕ್ಯಾಪ್ಟನ್‌ ಮಿಲ್ಲರ್‌ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next