Advertisement

Jawan: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ʼಜವಾನ್‌ʼ ಪ್ರಿಂಟ್ ಕಾಪಿ ಲೀಕ್

10:49 AM Sep 07, 2023 | Team Udayavani |

ಮುಂಬಯಿ: ಶಾರುಖ್‌ ಖಾನ್‌ ಅಭಿನಯದ ʼಜವಾನ್‌ʼ ಸಿನಿಮಾ ವಿಶ್ವದೆಲ್ಲೆಡೆ ಇಂದು (ಸೆ.7 ರಂದು) ಅದ್ಧೂರಿಯಾಗಿ ತೆರೆಕಂಡಿದೆ.

Advertisement

ಶಾರುಖ್‌ ಖಾನ್‌ – ಅಟ್ಲಿ ಸಿನಿಮಾವನ್ನು ನೋಡಲು ಥಿಯೇಟರ್‌ ನತ್ತ ಜನಹರಿದು ಬರುತ್ತಿದ್ದಾರೆ. ಎಲ್ಲೆಡೆ ಸಿನಿಮಾ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರು ಪಾಸಿಟಿವ್‌ ರೆಸ್ಪಾನ್ಸ್‌ ನೀಡುತ್ತಿದ್ದಾರೆ.

ಟ್ವಿಟರ್‌ ʼಜವಾನ್‌ʼ ಸಿನಿಮಾದ ವಿಮರ್ಶೆಗಳು ವೈರಲ್‌ ಆಗುತ್ತಿದೆ. ಸಿನಿಮಾವನ್ನು ನೋಡಿದವರು ಇದೊಂದು ದೊಡ್ಡ ಬ್ಲಾಕ್‌ ಬಸ್ಟರ್‌ ಸಿನಿಮಾವಾಗಲಿದೆ ಎಂದು ಹೇಳಿ ಶಾರುಖ್‌ ನಟನೆಯನ್ನು ಕೊಂಡಾಡಿದ್ದಾರೆ.

ಯಾವುದೇ ಒಂದು ದೊಡ್ಡ ಸಿನಿಮಾ ರಿಲೀಸ್‌ ಆದರೆ ಅದಕ್ಕೆ ಪೈರಸಿ ಕಾಟ ತಪ್ಪಿದ್ದಲ್ಲ. ಅದೇ ರೀತಿ ಶಾರುಖ್‌ ಖಾನ್‌ ಅವರ ʼಜವಾನ್‌ʼ ಸಿನಿಮಾಕ್ಕೂ ಪೈರಸಿ ಕಾಟ ತಟ್ಟಿದೆ.

ಇದನ್ನೂ ಓದಿ: Jawan Review: ಶಾರುಖ್‌ ʼಜವಾನ್‌ʼ ನೋಡಿ ಏನಂದ್ರು ಪ್ರೇಕ್ಷಕರು? ಹೇಗಿದೆ ರೆಸ್ಪಾನ್ಸ್?

Advertisement

ಕೆಲ ಟೊರೆಂಟ್ ಸೈಟ್‌ಗಳಲ್ಲಿ ʼಜವಾನ್‌ʼ ಸಿನಿಮಾ ಹೆಚ್‌ ಡಿ ವರ್ಷನ್‌ ನಲ್ಲಿ ಲೀಕ್‌ ಆಗಿದೆ ಎಂದು ಕೆಲ ವರದಿಗಳು ತಿಳಿಸಿವೆ. ತಮಿಳು ರಾಕರ್ಸ್, ಟೆಲಿಗ್ರಾಮ್ ಮತ್ತು ಮೂವೀರುಲ್ಜ್‌ನಲ್ಲಿ ನಂತಹ ಪೈರಸಿ ಸೈಟ್‌ ಗಳಲ್ಲಿ ಸಿನಿಮಾ ಲೀಕ್‌ ಆಗಿದೆ ಎಂದು ʼಫಿಲ್ಮ್‌ ಬೀಟ್‌ʼ ವರದಿ ತಿಳಿಸಿದೆ.

‘ಜವಾನ್’ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ಮುಂತಾದವರು ನಟಿಸಿದ್ದಾರೆ. ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next