Advertisement

ದುಬಾರಿ ‘ಜವಾನ್‌’; ಮತ್ತೆ ಬೇಡಿಕೆಯಲ್ಲಿ ಶಾರುಖ್‌ ಚಿತ್ರ

02:44 PM Jun 11, 2023 | Team Udayavani |

ಶಾರುಖ್‌ ಖಾನ್‌ ಅಭಿನಯದ “ಜವಾನ್‌’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಮೂಡಿವೆ. ಅಟ್ಲಿ ನಿರ್ದೇಶನದ ಚಿತ್ರವಿದು.

Advertisement

ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಶಾರುಖ್‌ ಅಭಿನಯದ “ಪಠಾಣ್‌’ ಚಿತ್ರವು ಜಗತ್ತಿನಾದ್ಯಂತ 1000 ಕೋಟಿ ರೂ. ಗಳಿಕೆ ಮಾಡುವ ಮೂಲಕ ಸೂಪರ್‌ ಹಿಟ್‌ ಆಗಿದೆ. ಈಗ “ಜವಾನ್‌’ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ, ಈ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿದ್ದು, ದೊಡ್ಡ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಲಾಗಿದೆಯಂತೆ.

ಇದನ್ನೂ ಓದಿ:ಗಿಲ್ OUT or NOT OUT? ಟಿವಿ ಅಂಪೈರ್ ವಿವಾದಾತ್ಮಕ ನಿರ್ಧಾರ; ಐಸಿಸಿ ನಿಯಮದಲ್ಲಿ ಏನಿದೆ?

ಚಿತ್ರದ ಓಟಿಟಿ, ಸ್ಯಾಟ್‌ಲೆçಟ್‌ ಮತ್ತು ಸಂಗೀತ ಹಕ್ಕುಗಳಿಗೆ ಬೇರೆ ಬೇರೆ ಸಂಸ್ಥೆಗಳು ದೊಡ್ಡ ಆಫ‌ರ್‌ ನೀಡಿದ್ದು, ಭಾರೀ ಮೊತ್ತಕ್ಕೆ ಹಕ್ಕುಗಳನ್ನುಕೊಂಡಿವೆ ಎನ್ನಲಾಗಿದೆ. ಈ ಆಕ್ಷನ್‌ ಥ್ರಿಲ್ಲರ್‌ ಚಿತ್ರದಲ್ಲಿ ಶಾರುಖ್‌ ಖಾನ್‌ ಜೊತೆಗೆ ನಯನತಾರಾ, ವಿಜಯ್‌ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next