ಮುಂಬಯಿ: ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಜವಾಬ್‌ನ ಯುವ ವಿಭಾಗದ ಮುಂದಾಳತ್ವದಲ್ಲಿ ಜವಾಬ್ ಪ್ರೀಮಿಯರ್ ಲೀಗ್ ಟರ್ಫ್ ಕ್ರಿಕೆಟ್ ಚಾಂಪಿಯನ್‌ಶಿಪ್ ಪಂದ್ಯಾಟವು ಫೆ. 10ರಂದು ಜಾನಕಿ ದೇವಿ ಸ್ಕೂಲ್ ಕ್ರಿಕೆಟ್ ಟರ್ಫ್‌ನಲ್ಲಿ ಅದ್ದೂರಿಯಾಗಿ ಜರಗಿತು.
ಬೆಳಗ್ಗೆ 9ಕ್ಕೆ ಜವಾಬ್‌ನ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಂದ್ಯಾಟವನ್ನು ಬಾಲಿವುಡ್‌ನ ಪ್ರಸಿದ್ಧ ಮಾರ್ಷಲ್ ಆರ್ಟ್ಸ್ ಕಲಾವಿದ ಚೀತಾ ಯಜ್ಞೆàಶ್ ಶೆಟ್ಟಿ ಮತ್ತು ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಆಡಳಿತ ಸಮಿತಿಯ ಸದಸ್ಯ ಮತ್ತು ಕಂಗನಾ ಲೀಗ್‌ನ ಕಾರ್ಯದರ್ಶಿ ನವೀನ್ ಶೆಟ್ಟಿ ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿ ಶುಭಹಾರೈಸಿದರು.
ಯುವ ವಿಭಾಗದ ಸಮನ್ವಯಕರಾದ ರಾಜೇಶ್ ಬಿ. ಶೆಟ್ಟಿ ಅವರೊಂದಿಗೆ ಜವಾಬ್‌ನ ಕ್ರೀಡಾ ಸಮಿತಿಯ ಅಧ್ಯಕ್ಷ ಪ್ರಭಾಕರ ಕೆ. ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಜವಾಬ್ ಪದಾಧಿಕಾರಿಗಳು, ವಿಶ್ವಸ್ತರು, ಮಾಜಿ ಅಧ್ಯಕ್ಷರುಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸರಣಿಯ ಶ್ರೇಷ್ಠ ಆಟಗಾರರಾಗಿ ಜವಾಬ್ ತಂಡದ ನಾಯಕ ರೋಶನ್ ರಘು ಶೆಟ್ಟಿ ಅವರು ಆಯ್ಕೆಯಾದರು. ಮಹಿಳಾ ಶ್ರೇಷ್ಠ ಆಟಗಾರ್ತಿಯಾಗಿ ದೀಕ್ಷಾ ಶೆಟ್ಟಿ ಅವರು ಬಹುಮಾನ ಪಡೆದರು.
ಮುಂಬಯಿ ನಗರದ ವಿವಿಧ ಕ್ರೀಡಾಕೂಟಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ, ಕ್ರೀಡಾಕೂಟಕ್ಕೆ ಮೆರುಗು ನೀಡಿದ್ದು, ಒಟ್ಟು 11 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಜವಾಬ್, ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ, ಬಂಟರ ಸಂಘ ಸಿಟಿ ಪ್ರಾದೇಶಿಕ ಸಮಿತಿ, ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ, ಬಂಟರ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಬಂಟರ ಸಂಘ ಕಲ್ಯಾಣ್-ಭಿವಂಡಿ ಪ್ರಾದೇಶಿಕ ಸಮಿತಿ, ಬಂಟರ ಸಂಘ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಪ್ರಾದೇಶಿಕ ಸಮಿತಿ, ಥಾಣೆ ಬಂಟ್ಸ್ ಅಸೋಸಿಯೇಶನ್, ಮುಲುಂಡ್ ಬಂಟ್ಸ್ ತಂಡಗಳು ಭಾಗವಹಿಸಿದ್ದವು.
ಸೆಮಿಫೈನಲ್ ಹಂತಕ್ಕೆ ಜವಾಬ್, ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ, ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಥಾಣೆ ಬಂಟ್ಸ್ ಅಸೋಸಿಯೇಶನ್ ಪ್ರವೇಶಿಸಿತು. ಫೈನಲ್‌ನಲ್ಲಿ ಜವಾಬ್ ತಂಡ ಮತ್ತು ಮೀರಾ-ಭಾಯಂದರ್ ತಂಡಗಳು ಮುಖಾಮುಖೀಯಾ ಗಿದ್ದು, ಜಿದ್ದಾಜಿದ್ದಿನ ಹೋರಾಟ ದಲ್ಲಿ ಜವಾಬ್ ತಂಡವು ವಿಜಯ ವಾಗುವುದರೊಂದಿಗೆ ಜವಾಬ್ ಪ್ರೀಮಿಯರ್ ಲೀಗ್ ಚಾಂಪಿ ಯನ್‌ಶಿಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಬಂಟರ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆಯಿತು.
ಮಹಿಳೆಯರು, ಜವಾಬ್ ಪರಿವಾರದ ಸದಸ್ಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಆಟಗಾರರನ್ನು ಪ್ರೋತ್ಸಾಹಿಸಿದರು. ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಜವಾಬ್‌ನ ಪದಾಧಿಕಾರಿಗಳು, ವಿಶ್ವಸ್ಥರು, ಮಾಜಿ ಅಧ್ಯಕ್ಷರುಗಳು, ಇತರ ಗಣ್ಯರು ಉಪಸ್ಥಿತರಿದ್ದು ಕ್ರೀಡಾಳುಗಳಿಗೆ ಬಹುಮಾನ ವಿತರಣೆ ಮಾಡಿ ಶುಭಹಾರೈಸಿದರು. ಕ್ರೀಡಾಕೂಟದ ಯಶಸ್ಸಿಗೆ ಮಹಿಳಾ ಕಾರ್ಯಕರ್ತರಾದ ರೂಪಾ ಪ್ರಭಾಕರ ಶೆಟ್ಟಿ, ರಂಜನಿ ಪ್ರವೀಣ್ ಶೆಟ್ಟಿ, ರೇಷ್ಮಾ ರಘು ಶೆಟ್ಟಿ, ಸೌಮ್ಯಾ ಶೆಟ್ಟಿ ಅವರು ಸಹಕರಿಸಿದರು.