Advertisement

ಶಿಕ್ಷಣಕ್ಕೆ ಫುಲೆ ಕೊಡುಗೆ ಅಪಾರ: ನಿಜಲಿಂಗ

11:14 AM Sep 26, 2019 | Naveen |

ಜೇವರ್ಗಿ: ಶಿಕ್ಷಣ ವ್ಯವಸ್ಥೆಗೆ ಸಾವಿತ್ರಿಬಾಯಿ ಫುಲೆ ದಂಪತಿ ಕೊಡುಗೆ ಅಪಾರವಾಗಿದೆ ಎಂದು ಸೊನ್ನ ಎಸ್‌ಜಿಎಸ್‌ವಿ ಪಿಯು ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಹೇಳಿದರು.

Advertisement

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಅಕ್ಷರದವ್ವ ಸಾವಿತ್ರಿ ಬಾ ಫುಲೆ ಅವರಿಗೆ ನಮನ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಗಣಪತಿ, ಸರಸ್ವತಿ ಮಾಡದ ಸಾಧನೆ, ಕ್ರಾಂತಿಯನ್ನು ಅಕ್ಷರದವ್ವ ಫುಲೆ ಮಾಡಿದ್ದಾರೆ. ಸಾವಿತ್ರಿ ಬಾಯಿ ಫುಲೆ ದೇಶವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದರು. ಸಮಾಜದಲ್ಲಿ ಸಾಕಷ್ಟು ಕಷ್ಟ-ನೋವನ್ನು ಅನುಭವಿಸಿದ ಫುಲೆ ಎದೆಗುಂದದೆ ಎಲ್ಲ ಜಾತಿ, ಜನಾಂಗದ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಅಪಾರ ಶ್ರಮಪಟ್ಟರು. ಆದರೆ ನಾವು ಅವರನ್ನು ಮರೆತು ಬೇರೆ ಯಾರನ್ನೋ ಪೂಜಿಸುತ್ತಿರುವುದು ದುರ್ದೈವದ ಸಂಗತಿ ಎಂದರು.

ಅನ್ನ, ಶಿಕ್ಷಣ, ಉದ್ಯೋಗ ಕೊಟ್ಟವರನ್ನು ಮರೆತರೆ ಹೆತ್ತ ತಂದೆ-ತಾಯಿಯನ್ನು ಮರೆತಂತೆ. ಆದರೆ ನಾವುಗಳು ವಿಜ್ಞಾನವನ್ನು ಅಪ್ಪಿಕೊಂಡು ಒಪ್ಪಿಕೊಳ್ಳುವ ಬದಲು ಅವಮಾನ ಮಾಡುತ್ತಿದ್ದೇವೆ. ವಿಜ್ಞಾನಿಗಳು ಅನಾಚಾರಕ್ಕೆ ನಿಂತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸೊನ್ನದ ಡಾ| ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಚಿಗರಳ್ಳಿ ಮಠದ ಸಿದ್ದಕಬೀರ ಸ್ವಾಮೀಜಿ ಸಾನ್ನಿಧ್ಯ, ವೇದಿಕೆ ತಾಲೂಕು ಸಂಚಾಲಕ ಶಿವಕುಮಾರ ಗೋಲಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ
ವಿಭಾಗೀಯ ಸಂಚಾಲಕ ಹಣಮಂತ ಯಳಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಉಪ ತಹಶೀಲ್ದಾರ್‌ ಬಸವರಾಜ ರಕ್ಕಸಗಿ, ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಡಾ| ಸಿದ್ದು ಪಾಟೀಲ, ಪ್ರಾಂಶುಪಾಲ ಬಸವರಾಜ ಕೊಂಬಿನ್‌, ಹೈಯಾಳಪ್ಪ ಗಂಗಾಕರ, ಶಿವಕುಮಾರ ಕಲ್ಲಾ, ಶ್ರೀಮಂತ ಧನ್ನಕರ್‌, ಮಲ್ಲಿಕಾರ್ಜುನ ಕುಳಗೇರಿ, ರವಿ ಕುಳಗೇರಾ, ಮಲ್ಲಿಕಾರ್ಜುನ ಮಳ್ಳಿ, ಪ್ರಭಾಕರ ಸಾಗರ, ಪೀರಪ್ಪ ರೇವನೂರ ಆಗಮಿಸಿದ್ದರು.

ಲಿಂಗಸೂಗೂರ ಬಿಆರ್‌ಸಿ ಹಣಮಂತ ಕುಳಗೇರಿ, ದಾವಣಗೆರೆ ವಿವಿಯ ಸಹ ಪ್ರಾಧ್ಯಾಪಕ ಡಾ| ಸಿದ್ದು ಕಕ್ಕಳಮೇಲಿ, ಡಾ| ಅಶೋಕ ದೊಡ್ಮನಿ, ನಿವೃತ್ತ ಶಿಕ್ಷಕ ಬಸಣ್ಣ ಬಬಲಾದ ಹಾಗೂ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next