Advertisement

ಸಾವಿರ ಉಚಿತ ಮಾಸ್ಕ್ ತಾಲೂಕಾಡಳಿತಕ್ಕೆ ಹಸ್ತಾಂತರ

05:24 PM Apr 27, 2020 | Naveen |

ಜೇವರ್ಗಿ: ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ಧೇವಾಡಗಿ ಉಚಿತವಾಗಿ ಸಾವಿರ ಮಾಸ್ಕ್ಗಳನ್ನು ವಿತರಿಸಿದರು.

Advertisement

ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಗಲಿರುಳು ಶ್ರಮವಹಿಸುತ್ತಿವೆ. ಆರೋಗ್ಯ, ಕಂದಾಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿ ಬಿಸಿಲು, ಮಳೆ ಲೆಕ್ಕಿಸದೇ ಸಾರ್ವಜನಿಕರಿಗೆ ಕೋವಿಡ್ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ತಡೆಗಟ್ಟಬೇಕಾಗಿದೆ ಎಂದು ಶಿವರಾಜ ಪಾಟೀಲ ಹೇಳಿದರು.

ನಂತರ ಸಾವಿರ ಮಾಸ್ಕ್ಗಳನ್ನು ತಹಶೀಲ್ದಾರ್‌ ಸಿದರಾಯ ಭೋಸಗಿ ಅವರ ಮೂಲಕ ತಾಲೂಕಾಡಳಿತಕ್ಕೆ ಹಸ್ತಾಂತರಿಸಿದರು. ಶಾಸಕ ಡಾ.ಅಜಯಸಿಂಗ್‌, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಿವನಗೌಡ ಹಂಗರಗಿ, ಬಾಪುಗೌಡ ಪಾಟೀಲ ಬಿರಾಳ, ಮಹಾಂತ ಸಾಹು ಹರವಾಳ, ವೀರೇಶ ಕಂದಗಲ್‌, ವಿಜಯಕುಮಾರ ಪಾಟೀಲ ಸೇಡಂ, ಅಖಂಡು ಕಲ್ಲಾ, ಶಿವಲಿಂಗ ಕಲ್ಲಹಂಗರಗಿ, ಶಿವುಕುಮಾರ ಕಲ್ಲಾ, ರವಿ ಕೋಳಕೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next