Advertisement

ಕನ್ನಡ ನಾಡು ಕಟ್ಟುವಲ್ಲಿ ದೇಜಗೌ ಶ್ರಮ ಅನನ್ಯ

06:04 PM Dec 21, 2017 | |

ಸಂಡೂರು: ಕನ್ನಡ ನಾಡು ಕಟ್ಟುವಲ್ಲಿ ದೇ.ಜವರೇಗೌಡರ ಪಾತ್ರ ಅಭೂತಪೂರ್ವವಾದುದು. ರಾಜ್ಯದಲ್ಲಿ ಜನಪದ ವಿಶ್ವವಿದ್ಯಾಲಯ ಸ್ಥಾಪನೆ, ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ಸಿಗುವಲ್ಲಿ ಅವರು ಶ್ರಮಿಸಿದ ಹೋರಾಟ ದೊಡ್ಡದು ಎಂದು ಡಾ| ಗುರುಪಾದ ಮರಿಗುದ್ದಿ ಸಂಕೇಶ್ವರ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ವಿರಕ್ತಮಠದಲ್ಲಿ ಕಸಾಪ ಮತ್ತು ಪ್ರಭುದೇವರ ಜನಕಲ್ಯಾಣ ಸಂಸ್ಥೆ ವತಿಯಿಂದ ಕನ್ನಡ ಸಾಹಿತಿಗಳ ಶತಮಾನ ಸ್ಮರಣೆ ಕಾರ್ಯಕ್ರಮದಲ್ಲಿ ದೇ.ಜ.ಗೌ ಕುರಿತು ಮಾತನಾಡಿದ ಅವರು, ಬಸವಣ್ಣ ಮತ್ತು ಕುವೆಂಪು ಅವರ ಬಗ್ಗೆ ಇಡೀ ನಾಡಿಗೆ ಪೂರ್ಣ
ಪರಿಚಯಿಸುವಂತಹ, ಸಾಹಿತ್ಯ ರಚಿಸುವಂತಹ ಮಹತ್ತರ ಕಾರ್ಯ ದೇ.ಜ.ಗೌ ಮಾಡಿದವರು ಎಂದರು.

ಕನ್ನಡ ಭಾಷೆ ವಿದೇಶಕ್ಕೆ ಪಸರಿಸಲು ಅನುವಾದ ಮಾಡಿದ ಕಾರ್ಯ, ಅನೇಕ ಸಾಹಿತಿಗಳನ್ನು ಕರೆ ತಂದು ಮೈಸೂರು ವಿಶ್ವವಿದ್ಯಾಲಯ ಶ್ರೇಷ್ಠ ವಿಶ್ವವಿದ್ಯಾಲಯವನ್ನಾಗಿ ಮಾಡಿದ ಕೀರ್ತಿ ದೆ.ಜೆ. ಗೌ ಅವರಿಗೆ ಸಲ್ಲುತ್ತದೆ. ಅವರು 365 ಕೃತಿಗಳನ್ನು
ಪ್ರಕಟಿಸಿದರು ಎಂದು ತಿಳಿಸಿದರು. 

ಡಾ|ಎಚ್‌.ಎಸ್‌. ಸತ್ಯನಾರಾಯಣ ಮಾತನಾಡಿ, ಬಿ.ಜಿ.ಎಲ್‌. ಸ್ವಾಮಿಯವರು ಡಿ.ವಿ.ಗುಂಡಪ್ಪನವರ ಮಗನಾಗಿದ್ದರೂ ಸಹ ಅವರನ್ನು ಹೊರತುಪಡಿಸಿ ಸ್ವಂತ ಬೆಳೆದು ನಿಂತವರಲ್ಲಿ ಬಿ.ಜಿ.ಎಲ್‌. ಸ್ವಾಮಿ ಒಬ್ಬರು. ಅವರು ಒಬ್ಬ ಶೇಷ್ಠ ಸಸ್ಯ ವಿಜ್ಞಾನಿಯಾಗಿ ಕನ್ನಡ ಸಾಹಿತ್ಯವನ್ನು ರಚಿಸಿ ಇಡೀ ವಿಶ್ವಕ್ಕೆ ತಮ್ಮ ಸಾಹಿತ್ಯವನ್ನು ಪರಿಚಯ ಮಾಡಿದವರು. ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದೆ ಮತ್ತು ಮಗ ಪಡೆದವರಲ್ಲಿ ಮೊದಲಿಗರಾಗಿ ಬಿ.ಜಿ.ಎಲ್‌.ಸ್ವಾಮಿ ಮತ್ತು ಡಿ.ವಿ.ಜಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಡಾ| ಅಮರೇಶ್‌ ನುಗಡೋಣಿ ಮಾತನಾಡಿ, ಪ್ರತಿಯೊಂದು ಮಠಕ್ಕೆ ಒಬ್ಬ ಸಾಹಿತಿ ಮಾರ್ಗದರ್ಶನ ಮಾಡಿದರೆ ಬೌದ್ಧಿಕವಾಗಿ ಆ ಮಠ ಬೆಳೆಯಲು ಕಾರಣವಾಗುತ್ತದೆ. ಕವಿಗಳ ಸಾಹಿತ್ಯದ ಸಾಧನೆ ಮತ್ತು ಅವರ ನಿಜವಾದ ಕೃತಿಗಳ ಪರಿಚಯವನ್ನು ಸಾಹಿತ್ಯ ಮೂಲಕ, ಚಿಂತನೆ ಮೂಲಕ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

Advertisement

ವಿರಕ್ತಮಠದ ಪ್ರಭುಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಯಶವಂತನಗರದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ದೇವರು, ತಾಲೂಕು ಕಸಾಪ ಅಧ್ಯಕ್ಷ ಬಿ.ನಾಗನಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next