Advertisement

ಜಾಂಡಿಸ್‌ ಅಥವಾ ಕಾಮಾಲೆ

06:00 AM Aug 12, 2018 | |

ಹಿಂದಿನ ವಾರದಿಂದ-  ವೈರಸ್‌ಗಳ ಹೊರತಾಗಿ ಜಾಂಡಿಸ್‌ ಉಂಟಾಗಲು ಇನ್ನೊಂದು ಮುಖ್ಯ ಕಾರಣ ಎಂದರೆ ಮದ್ಯಪಾನ. ಅತಿಯಾದ ಮದ್ಯ ಸೇವನೆಯು ಜಾಂಡಿಸ್‌ ಮಾತ್ರವಲ್ಲದೆ ಪಿತ್ತಕೋಶದ ಸಿರೋಸಿಸ್‌ಗೂ ಕಾರಣವಾಗಬಲ್ಲದು. ದೇಹದ ಈ ಭಾಗದಲ್ಲಿ ಸಿರೋಸಿಸ್‌ಗೆ ಮದ್ಯಪಾನವೇ ಮುಖ್ಯ ಕಾರಣವಾಗಿರುತ್ತದೆ.

Advertisement

ಮದ್ಯಪಾನದಿಂದ ಉಂಟಾಗುವ ಪಿತ್ತಕೋಶದ ಸಿರೋಸಿಸ್‌ಗೆ ಚಿಕಿತ್ಸೆ ನೀಡಲು ನಮ್ಮಲ್ಲಿ ಪರಿಣಾಮಕಾರಿಯಾದ ಔಷಧಗಳು ಇಲ್ಲ. ಮದ್ಯಪಾನವನ್ನು ನಿಲ್ಲಿಸುವುದಲ್ಲದೆ ಬೇರೆ ದಾರಿಯೇ ಇಲ್ಲ.ಇದು ಮದ್ಯಪಾನದಿಂದ ಉಂಟಾಗುವ ಜಾಂಡಿಸ್‌. ಇನ್ನೊಂದು ವಿಧವಾದ ಜಾಂಡಿಸ್‌ ಇದೆ – ಅಬ್‌ಸ್ಟ್ರಕ್ಟಿವ್‌ ಜಾಂಡಿಸ್‌ ಅಥವಾ ಪ್ರತಿಬಂಧಾತ್ಮಕ ಜಾಂಡಿಸ್‌. ಇದು ಪಿತ್ತರಸ ಹರಿಯುವ ಮಾರ್ಗದಲ್ಲಿ ತಡೆ ಉಂಟಾಗಿ ಪಿತ್ತರಸದ ಹರಿವು ಅಡಚಣೆಗೆ ಒಳಗಾಗುವುದರಿಂದ ಉಂಟಾಗುತ್ತದೆ. ಈ ಅಡಚಣೆ ಉಂಟಾಗುವುದಕ್ಕೆ ಎರಡು ಮುಖ್ಯ ಕಾರಣಗಳೆಂದರೆ, ಪಿತ್ತಕೋಶದ ಕಲ್ಲುಗಳು. ಇವು ಪಿತ್ತಕೋಶದಲ್ಲಿ ಉಂಟಾಗಿ ಅಲ್ಲಿಂದ ಹೊರಜಾರಿ ಪಿತ್ತರಸ ಹರಿಯುವ ಮಾರ್ಗದಲ್ಲಿ ಅಡಚಣೆ ಸೃಷ್ಟಿಸುತ್ತವೆ. ಇನ್ನೊಂದು, ಪಿತ್ತರಸ ಹರಿಯುವ ಮಾರ್ಗದಲ್ಲಿ ಸೃಷ್ಟಿಯಾಗಿ ಅಡಚಣೆ ಉಂಟು ಮಾಡುವ ಗಡ್ಡೆಗಳು. ಈ ಗಡ್ಡೆಗಳು ಪಿತ್ತಕೋಶದಿಂದ ಉಂಟಾಗಬಹುದು, ಪಿತ್ತರಸ ಹರಿಯುವ ಮಾರ್ಗದಲ್ಲಿ ಉಂಟಾಗಬಹುದು ಮತ್ತು ಮೇದೋಜೀರಕ ಗ್ರಂಥಿಯಲ್ಲಿ ಉಂಟಾಗಬಹುದು. ಇವು ಪಿತ್ತರಸ ಹರಿಯುವಿಕೆಗೆ ಅಡಚಣೆ ಉಂಟು ಮಾಡುವ ಒಬ್‌ಸ್ಟ್ರಕ್ಟಿವ್‌ ಜಾಂಡಿಸ್‌ಗೆ ಉದಾಹರಣೆಗಳು. 

ನಾವು ಈ ವಿಧವಾದ ಜಾಂಡಿಸ್‌ 
ಗುರುತಿಸುವುದು ಹೇಗೆ?

ಈ ವಿಧವಾದ ಜಾಂಡಿಸ್‌ಗೆ ತುತ್ತಾಗಿರುವ ರೋಗಿಗಳಿಗೆ ದೇಹದಲ್ಲೆಲ್ಲ ತುರಿಕೆ ಉಂಟಾಗುತ್ತದೆ. ಹೊಟ್ಟೆಯ ಭಾಗದ ಅಲ್ಟ್ರಾಸೌಂಡ್‌ ತಪಾಸಣೆ ನಡೆಸಿದಾಗ ಅಡಚಣೆಯಿಂದಾಗಿ ಪಿತ್ತರಸ ಹರಿಯುವ ಮಾರ್ಗವು ಊದಿಕೊಂಡಿರುವುದು ಅಥವಾ ದೊಡ್ಡದಾಗಿರುವುದು ಗಮನಕ್ಕೆ ಬರುತ್ತದೆ. ಅಡಚಣೆಗೆ ಕಾರಣ ಗಡ್ಡೆಯೇ ಅಥವಾ ಕಲ್ಲೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಸಿಟಿ ಸ್ಕ್ಯಾನ್‌ ಅಥವಾ ಎಂಆರ್‌ಐ ತಪಾಸಣೆ ನಡೆಸಬಹುದು. ಗಡ್ಡೆಯಾಗಿದ್ದಲ್ಲಿ, ಸಿಟಿ ಸ್ಕ್ಯಾನ್‌ ಅಥವಾ ಎಂಆರ್‌ಐಯಂತಹ ಸುಧಾರಿತ ತಪಾಸಣಾ ವಿಧಾನಗಳು ರೋಗಿಯನ್ನು ಶಸ್ತ್ರಚಿಕಿತ್ಸೆಗೆ ಗುರಿಪಡಿಸಬಹುದೇ ಬೇಡವೇ ಎಂಬ ಮಾಹಿತಿಯನ್ನೂ ಒದಗಿಸುತ್ತವೆ. ಪಿತ್ತರಸ ಹರಿಯುವ ಮಾರ್ಗದಲ್ಲಿನ ಈ ಅಡಚಣೆಯನ್ನು ಇಆರ್‌ಸಿಪಿ ವಿಧಾನದಿಂದ ನಿವಾರಿಸಬಹುದು. ಇಆರ್‌ಸಿಪಿಯು ಎಂಡೊಸ್ಕೊಪಿಕ್‌ ಚಿಕಿತ್ಸೆಯಾಗಿದ್ದು, ನಮನೀಯ ಸೂಕ್ಷ್ಮ ಕೊಳವೆಯೊಂದನ್ನು ಡ್ನೂಡೆನಮ್‌ ಒಳಕ್ಕೆ ಕಳುಹಿಸಿ ಒಂದು ಸೂಕ್ಷ್ಮ ಬಲೂನ್‌ ಅಥವಾ ಬಾಸ್ಕೆಟ್‌ನ ಸಹಾಯದಿಂದ ಕಲ್ಲನ್ನು ತೆಗೆದುಹಾಕಲಾಗುತ್ತದೆ. ಗಡ್ಡೆಯಾಗಿದ್ದಲ್ಲಿ, ಪ್ಲಾಸ್ಟಿಕ್‌ ಅಥವಾ ಲೋಹದ ಕೊಳವೆಯನ್ನು ಪಿತ್ತರಸ ಹರಿಯುವ ಮಾರ್ಗದಲ್ಲಿ ಅಡಚಣೆಯ ಮೂಲಕ ಸ್ಥಾಪಿಸಿ ಪಿತ್ತರಸದ ಹರಿವಿಗೆ ಮಾರ್ಗ ಮಾಡಿಕೊಡಲಾಗುತ್ತದೆ. ಇದರಿಂದ ಜಾಂಡಿಸ್‌ ಕಡಿಮೆಯಾಗುತ್ತದೆ. ಆದರೆ ಗಡ್ಡೆಯು ಕ್ಯಾನ್ಸರ್‌ನ ಪ್ರಾಥಮಿಕ ಹಂತವಾಗಿದ್ದರೆ ಶಸ್ತ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ. 

ಹೀಗಾಗಿ ಜಾಂಡಿಸ್‌ ಎನ್ನುವುದು ಸ್ವತಃ ಒಂದು ಕಾಯಿಲೆ ಅಲ್ಲ. ಜಾಂಡಿಸ್‌ನಲ್ಲಿ ಹಲವಾರು ವಿಧಗಳಿವೆ. ಜಾಂಡಿಸ್‌ ಉಂಟಾದಾಗ ವೈದ್ಯರ ಬಳಿಗೆ, ಅದರಲ್ಲೂ ಗ್ಯಾಸ್ಟ್ರೊ ಎಂಟರಾಲಜಿಸ್ಟ್‌ ಬಳಿಗೆ ತೆರಬೇಕಾಗುತ್ತದೆ. ಅವರು ಅಗತ್ಯ ತಪಾಸಣೆಗಳನ್ನು ನಡೆಸಿ ಉಂಟಾಗಿರುವುದು ಪ್ರಿಹೆಪಾಟಿಕ್‌ ಜಾಂಡಿಸ್‌ ಅಥವಾ ಪಿತ್ತಕೋಶದ ಕಾಯಿಲೆಗಳಿಂದ ಜಾಂಡಿಸ್‌ ಉಂಟಾಗಿದೆಯೇ ಯಾ ಪಿತ್ತರಸದ ಮಾರ್ಗದಲ್ಲಿ ಉಂಟಾಗಿರುವ ಅಡಚಣೆಯಿಂದ ಅದು ಕಾಣಿಸಿಕೊಂಡಿದೆಯೇ ಎಂಬುದನ್ನು ನಿರ್ಧರಿಸುತ್ತಾರೆ. ಅವರು ರಕ್ತ ಪರೀಕ್ಷೆಗಳನ್ನು ನಡೆಸಬಹುದು, ಹೊಟ್ಟೆಯ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ನಡೆಸಬಹುದು ಮತ್ತು ಅಗತ್ಯವಿದ್ದರೆ ಸಿಟಿ ಅಥವಾ ಎಂಆರ್‌ಐ ಸ್ಕ್ಯಾನಿಂಗ್‌ ಕೂಡ ನಡೆಸಬಹುದು. ಚಿಕಿತ್ಸೆಯು ಜಾಂಡಿಸ್‌ ಉಂಟಾಗಲು ಏನು ಕಾರಣ ಎಂಬುದನ್ನು ಆಧರಿಸಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next