Advertisement

ಮಕ್ಕಳಲ್ಲಿ ಜಾಂಡಿಸ್‌, ಟೈಫಾಯ್ಡ

02:39 PM Feb 11, 2021 | Team Udayavani |

ಯಳಂದೂರು: ಪಟ್ಟಣದ ಹಲವೆಡೆ ಮಕ್ಕಳಲ್ಲಿ ಜಾಂಡೀಸ್‌, ಟೈಪಾಯ್ಡ ಜ್ವರ ಕಾಣಿಸಿಕೊಂಡಿದ್ದು, ಪೋಷಕರಲ್ಲಿ ಆತಂಕ ಮೂಡಿದೆ.

Advertisement

ಬಳೇಪೇಟೆಯಲ್ಲಿರುವ 10ನೇ ವಾಡ್‌ ìನಲ್ಲಿ ಕಳೆದ ಹಲವು ದಿನಗಳಿಂದ 15ಕ್ಕೂ ಹೆಚ್ಚು ಮಕ್ಕಳಿಗೆ ಜಾಂಡೀಸ್‌ ಹಾಗೂ ಟೈಫಾಯ್ಡ ಜ್ವರ ಕಾಣಿಸಿಕೊಳ್ಳುತ್ತಿದೆ. ಪಟ್ಟಣದ 10ನೇ ವಾರ್ಡ್‌ನ ಕಣಿ ಯರ ಬೀದಿ, ಮುಸ್ಲಿಂ ಬೀದಿ ಹಾಗೂ ಹಳ್ಳದ ಬೀದಿಯ ಮಕ್ಕಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇದಕ್ಕೆ ಕಲುಷಿತ ನೀರಿನ ಸೇವನೆಯೇ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.

ಕಳೆದ ಹಲವು ದಿನಗಳಿಂದ ಇಲ್ಲಿಗೆ ಪಟ್ಟಣ ಪಂಚಾಯಿತಿಯಿಂದ ಪೂರೈಕೆಯಾಗುವ ನೀರು ಕಲುಷಿತಗೊಂಡಿತ್ತು. ನೀರಿನಲ್ಲಿ ಹುಳಗಳು ಹಾಗೂ ಕೆಟ್ಟ ವಾಸನೆ ಕೂಡ ಬರುತ್ತಿತ್ತು. ಈ ಬಗ್ಗೆ ಹಲವು ಬಾರಿಪಂಚಾಯಿತಿಗೆ ದೂರು ನೀಡಿದ್ದರೂ ಕ್ರಮ ವಹಿಸಿಲ್ಲ. ಇದರಿಂದಲೇ ಈ ಕಾಯಿಲೆಗಳು ನಮ್ಮ ಮಕ್ಕಳನ್ನು ಬಾಧಿಸು ತ್ತಿವೆ ಎಂಬುದು ಇಲ್ಲಿನ ಶ್ರೀಕಂಠಸ್ವಾಮಿ, ಅಸ್ಮ, ಮುನ್ನ ಸೇರಿದಂತೆ ಹಲವರ ದೂರಾಗಿದೆ.

ಈ ಬಗ್ಗೆ ಸಾಮಾನ್ಯ ಸಭೆಯಲ್ಲೂಚರ್ಚೆ ನಡೆದಿದ್ದು, ಇಲ್ಲಿನ ವಾರ್ಡ್‌ ಸದಸ್ಯೆ ಲಕ್ಷ್ಮೀಮಲ್ಲು ಅವರು ಬಾಟಲಿ  ಯಲ್ಲಿ ನೀರನ್ನು ಶೇಖರಿಸಿ ತಂದಿದ್ದು, ಈಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸಭೆಯಲ್ಲೇ ಸೂಚನೆ ನೀಡಿದ್ದರು.

ಇದನ್ನೂ ಓದಿ:ಐಶ್ವರ್ಯಾ- ಅಮರ್ಥ್ಯ ವಿವಾಹ: ಡಿಕೆಶಿ ಮನೆಯಲ್ಲಿ ಸಂಭ್ರಮದ ಹಳದಿ ಕಾರ್ಯಕ್ರಮ

Advertisement

ಪಟ್ಟಣದ 10ನೇ ವಾರ್ಡಿನ ಮುಸ್ಲಿಂ ಬೀದಿ, ಗಾಣಿಗರ ಬೀದಿ, ಕಣಿಯರ ಬೀದಿ ಹಾಗೂ ಹಳ್ಳದ ಬೀದಿಗಳಿಗೆ ಸರಬರಾಜಾಗುವನೀರು ಕಲುಷಿತವಾಗಿದೆ ಎಂಬ ದೂರು ಇತ್ತು. ಕುಡಿಯುವ ನೀರು ಸರಬರಾಜು ಆಗುವ 3 ಕಡೆ ಪೈಪ್‌ ಒಡೆದಿದ್ದು, ದುರಸ್ತಿ ಮಾಡಲಾಗಿದೆ.  ಸ್ಥಳೀಯ ಆರೋಗ್ಯ ಇಲಾಖೆಯ ಕಾರ್ಯಕರ್ತೆಯರ ನೆರವಿನಿಂದ ನೀರಿನ ಸ್ಯಾಂಪಲ್‌ಗ‌ಳನ್ನು ಪಡೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿದೆ.

ಮಹೇಶ್ಕುಮಾರ್‌, ಆರೋಗ್ಯಾಧಿಕಾರಿ,

Advertisement

Udayavani is now on Telegram. Click here to join our channel and stay updated with the latest news.

Next