Advertisement

ಸಂಭ್ರಮದ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ

10:49 AM Jun 10, 2022 | Team Udayavani |

ಗುಳೇದಗುಡ್ಡ: ಸಮೀಪದ ತಿಮ್ಮಸಾಗರ ಗ್ರಾಮದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು.

Advertisement

ಜಾತ್ರಾಮಹೋತ್ಸವದಲ್ಲಿ ಗ್ರಾಮದ ಪ್ರತಿಯೊಬ್ಬರು ದೇವಿಗೆ ಹೂವಿನ ಮಳೆಗೈದು ಭಕ್ತಿಯಲ್ಲಿ ಮಿಂದೆದ್ದರು. ಕೋಟೆಕಲ್‌ ಗ್ರಾಮದಿಂದ ತಿಮ್ಮಸಾಗರ ಗ್ರಾಮಕ್ಕೆ ಅಮ್ಮನವರನ್ನು ಗ್ರಾಮದಲ್ಲಿ ವಾದ್ಯ ಮೇಳಗಳೊಂದಿಗೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.

ಬೆಳಿಗ್ಗೆ ದ್ಯಾಮವ್ವ ದೇವಿಗೆ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ನಂತರ ರಾತ್ರಿ 8ಗಂಟೆಗೆ ಗ್ರಾಮದ ಪ್ರತಿ ಮನೆಯಿಂದ ಸಿಹಿ ಖಾದ್ಯಗಳನ್ನು ತಯಾರಿಸಿ, ತಾಯಿಗೆ ಎಡೆ ಕೊಡಲಾಯಿತು. ದ್ಯಾಮವ್ವ ದೇವಿಗೆ ಗ್ರಾಮದ ಪ್ರತಿಯೊಂದು ಮನೆಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ನೆರೆದ ಭಕ್ತರು ಮಧ್ಯಾಹ್ನ ತಯಾರಿಸಿದ ಹೋಳಿಗೆ ಸೀಕರಣೆ ಪ್ರಸಾದ ಸ್ವೀಕರಿಸಿ, ಪುನೀತರಾದರು.

ನಂತರ ಸಂಜೆ ದ್ಯಾಮವ್ವ ದೇವಿ ಅಮ್ಮನವರ ಗುಡಿ ಪ್ರವೇಶ ಮಾಡಿದರು. ದ್ಯಾಮವ್ವ ದೇವಿಗೆ ಬೇಡಿಕೊಂಡ ಹರಕೆ ಹೊತ್ತ ಗ್ರಾಮದ ನೂರಾರು ಭಕ್ತರು ದೀರ್ಘ‌ದಂಡ ನಮಸ್ಕಾರ ಹಾಕಿದರು.

ರಾತ್ರಿ 10:30ಕ್ಕೆ ಬಸವೇಶ್ವರ ಯುವಕ ಮಂಡಳದ ವತಿಯಿಂದ ತವರಿನಲ್ಲಿ ನೆಲೆ ಇಲ್ಲಾ ತಂಗಿ ಎಂಬ ನಾಟಕ ಪ್ರದರ್ಶನ ನಡೆಯಿತು.

Advertisement

ಜಾತ್ರಾ ಮಹೋತ್ಸವದಲ್ಲಿ ಮುತ್ತನ ಗೌಡ ಪಾಟೀಲ, ಮುತ್ತಣ್ಣ ಕಾಳನ್ನವರ, ಮುತ್ತಪ್ಪ ತೆಗ್ಗಿ, ಶಂಕ್ರಯ್ಯ ವಿಭೂತಿ, ಅಡವಯ್ಯ ವಿಭೂತಿ, ಮಂಜುನಾಥ ಮುಗಳೊಳ್ಳಿ, ಶರಣಬಸು ಗೌಡರ, ಮಲ್ಲನಗೌಡ ಗೌಡರ, ಅಯ್ಯಪ್ಪ ಸಿಮೀಕೇರಿ, ಮಲ್ಲಿಕಾರ್ಜುನ ಗಂಗಶೆಟ್ಟಿ, ರಂಗಪ್ಪ ವಾಲಿಕಾರ, ಶಿವು ಮಳಗಾವಿ ಸೇರಿದಂತೆ ಕೆಲವಡಿ, ಲಿಂಗಾಪುರ, ಗುಳೇದಗುಡ್ಡ ರೋಡ್‌, ತೆಗ್ಗಿ ಕೋಟೆಕಲ್‌, ತೋಗುಣಶಿ, ಖಾಜಿಬೂದಿಹಾಳ, ಹಂಗರಗಿ, ಹಿರೇಬೂದಿಹಾಳ, ಕಟಗೇರಿ ಸೇರಿದಂತೆ ಇನ್ನೂ ಹಲವಾರು ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next