ಹುಣಸೂರು: ತಾಲೂಕಿನ ಹನಗೋಡಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಪಂ ಹಾಗೂ ಪ್ರೌಢಶಾಲಾ ಮಕ್ಕಳಿಂದ ಡೆಂಘೀ, ಚಿಕುನ್‌ಗುನ್ಯಾ, ಮಲೇರಿಯಾ ಮಾಸಚರಣೆ ಅಂಗವಾಗಿ ಸಾಂಕ್ರಮಿಕ ರೋಗಗಳ ಹತೋಟಿ ಬಗ್ಗೆ ಜಾಗೃತಿ ಜಾಥಾ ನಡೆಸಿದರು.
ವೈದ್ಯಾಧಿಕಾರಿ ಡಾ. ಜೋಗೇಂದ್ರನಾಥ್ ಮಾತನಾಡಿ, ಮನೆಯಲ್ಲಿರುವ ನೀರಿನ ತೊಟ್ಟಿಗಳನ್ನು ಆಗಾಗ್ಗೆ ಶುಚಿಗೊಳಿಸುತ್ತಿರಬೇಕು. ಮನೆ ಸುತ್ತ-ಮುತ್ತ ತೆಂಗಿನ ಚಿಪ್ಪು, ಟೈರ್ ಸೇರಿದಂತೆ ಅನುಪಯುಕ್ತ ಪದಾರ್ಥಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
ಚರಂಡಿ ಹಾಗೂ ಅನುಪಯುಕ್ತ ವಸ್ತುಗಳಲ್ಲಿ ಸಂಗ್ರಹವಾಗುವ ನೀರಿನಿಂದಲೇ ಸೊಳ್ಳೆಗಳು ಸಂತಾನೋತ್ಪತ್ತಿಯಾಗುವುದರಿಂದ ಸ್ವತ್ಛತೆಗೆ ಎಲ್ಲರೂ ಆದ್ಯತೆ ನೀಡಬೇಕು, ಜ್ವರ ಬಂದ ತಕ್ಷಣ ಅಸ್ಪತ್ರೆಗೆ ಬಂದು ರಕ್ತಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಹನಗೋಡು ಗ್ರಾಪಂ ಅಧ್ಯಕ್ಷ ಎಚ್.ಬಿ.ಮಧು ಮಾತನಾಡಿ, ಗ್ರಾಮ ಪರಿಮಿತಿಯಲ್ಲಿರುವ ಎಲ್ಲಾ ರಸ್ತೆ ಹಾಗೂ ಚರಂಡಿಗಳನ್ನು ಗ್ರಾಪಂ ವತಿಯಿಂದ ಸ್ವತ್ಛಗೊಳಿಸಲಾಗಿದೆ. ಗ್ರಾಮಸ್ಥರು ತಮ್ಮ ತಮ್ಮ ಮನೆಗಳ ಮುಂದೆ ರಸ್ತೆ ಹಾಗೂ ಚರಂಡಿಗಳಲ್ಲಿ ಕೊಳಚೆ ನೀರು ನಿಲ್ಲದಂತೆ ಸ್ವತ್ಛಗೊಳಿಸಿಕೊಂಡು ಉತ್ತಮ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕೆಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯ ಇಮಿ¤ಯಾಜ್ ಪಾಷ, ಪ್ರೌಢಶಾಲೆಯ ಉಪ ಪ್ರಾಶುಂಪಾಲ ಸಿದ್ದರಾಜು ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.