ಕುಂದಾಪುರ: ಹೊಸದಾಗಿ ನೋಂದಾಯಿಸಿ ಮತದಾರರು ಉತ್ಸಾಹದಿಂದ ಮತಚಲಾಯಿಸಿ. ಆದರೆ ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ಆಡಳಿತ ಕೊಡುವ ಸಂಕಲ್ಪ ಮಾಡಿ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಡಾ| ಮಧುಕೇಶ್ವರ್ ಹೇಳಿದರು.
ಅವರು ಮಂಗಳವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ಮತದಾನದ ಅರಿವು ಮತ್ತು ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ನಾವು ಹಕ್ಕುಗಳನ್ನು ಕೇಳುತ್ತೇವೆ. ಆದರೆ ಮತದಾನದಂತಹ ಕರ್ತವ್ಯಗಳನ್ನು ಮಾಡಲು ಉದಾಸೀನ ಪಡುತ್ತೇವೆ. ಸ್ವತಂತ್ರವಾಗಿ ಯೋಚಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಉತ್ತಮ ಆಡಳಿತ ಕೊಡಲು ಯುವಜನತೆ ನಿರ್ಧರಿಸುವ ಮತವೇ ಆದರ್ಶವಾಗಲಿದೆ. ಇಂತಹ ಮತದಾನದ ಜಾಗೃತಿಯನ್ನು ಇತರರಿಗೂ ಮಾಡಿ ಎಂದು ಹೇಳಿದರು.
ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡೆ°àಕರ್, ತಹಶೀಲ್ದಾರ್ ವಿಜಯೇಂದ್ರ ಬಾಡ್ಕರ್, ಪದವಿ ಪೂರ್ವ ಶಿಕ್ಷಣ ವಿದ್ಯಾಂಗ ಇಲಾಖೆ ಉಪನಿರ್ದೇಶಕ ಸುಬ್ರಹ್ಮಣ್ಯ ಜೋಷಿ, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಸಮಾಜ ಕಲ್ಯಾಣಾಧಿಕಾರಿ ರಾಘವೇಂದ್ರ ವೆರ್ಣೇಕರ್, ತಾಲೂಕು ದೈಹಿಕ ಶಿಕ್ಷಣ ವೀಕ್ಷಕ ಕುಸುಮಾಕರ ಶೆಟ್ಟಿ ಉಪಸ್ಥಿತರಿದ್ದರು.
ಕ್ಷೇತ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರ್ವಹಿಸಿದರು.
ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜಾಗೃತಿಗೀತೆ ಹಾಡಿದರು. ಭಂಡಾರ್‌ಕಾರ್ಸ್ ಕಾಲೇಜು, ವಡೇರಹೋಬಳಿ ಪ್ರೌಢಶಾಲೆ, ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಂದ ಗಾಂಧಿ ಮೈದಾನದಿಂದ ಬಸ್‌ನಿಲ್ದಾಣ ಮೂಲಕ ಶಾಸಿŒ ಸರ್ಕಲ್‌ವರೆಗೆ ಜಾಥಾ ನಡೆಯಿತು.