ಜೋಹಾನ್ಸ್ ಬರ್ಗ್: ಇಲ್ಲಿನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಸರಣಿ ಸಮಬಲ ಪಡಿಸಲು ಡೀನ್ ಎಲ್ಗರ್ ಪಡೆಗೆ ಭಾರತ ತಂಡ 240 ರನ್ ಗುರಿ ನೀಡಿದೆ.
ಮೂರನೇ ದಿನದಾಟದಲ್ಲಿ ಭಾರತದ ತಂಡದ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಜಸ್ಪ್ರೀತ್ ಬುಮ್ರಾ ಮತ್ತು ದಕ್ಷಿಣ ಆಫ್ರಿಕಾ ವೇಗಿ ಮಾರ್ಕ್ ಜೆನ್ಸನ್ ನಡುವೆ ಜಗಳ ನಡದಿದೆ.
54 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಜೆನ್ಸನ್ ಎಸೆದ ಶಾರ್ಟ್ ಎಸೆತವನ್ನು ಬುಮ್ರಾ ಪುಲ್ ಮಾಡಲು ಪ್ರಯತ್ನಿಸಿದರು ಆದರೆ ಅದು ಬುಮ್ರಾ ದೇಹಕ್ಕೆ ಬಡಿಯಿತು. ಅದರ ಬಳಿಕ ಬುಮ್ರಾ- ಜೆನ್ಸನ್ ಪಿಚ್‌ನ ಮಧ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿ ಕೆಲವು ಸೆಕೆಂಡುಗಳ ಕಾಲ ಆಕ್ರಮಣಕಾರಿಯಾಗಿ ಮಾತನಾಡಿದರು.
ಇದನ್ನೂ ಓದಿ:ಜೊಹಾನ್ಸ್‌ಬರ್ಗ್ ಟೆಸ್ಟ್: ಸರಣಿ ಇತಿಹಾಸವೋ? ಸಮಬಲವೋ?
ಹಿಂದಿನ ಎಸೆತದಲ್ಲೂ ಬುಮ್ರಾ ಭುಜದ ಮೇಲೆ ಪೆಟ್ಟು ಬಿದ್ದಿತ್ತು. ಹೀಗಾಗಿ ಬುಮ್ರಾ ಕೋಪಗೊಂಡಿದ್ದರು. ಕೂಡಲೇ ಮಧ್ಯಪ್ರವೇಶಿಸಿ ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
57ನೇ ಓವರ್ ನಲ್ಲಿ ಲುಂಗಿ ಎನ್ ಗಿಡಿ ಎಸೆತದಲ್ಲಿ ಬುಮ್ರಾ ಪಾಯಿಂಟ್ ನಲ್ಲಿದ್ದ ಜೆನ್ಸನ್ ಗೆ ಕ್ಯಾಚ್ ನೀಡಿ ಔಟಾದರು.