ದುಬೈ: ಟಿ20 ವಿಶ್ವಕಪ್ ಕೂಟದಲ್ಲಿ ಭಾರತ ತಂಡ ಎರಡನೇ ಜಯ ದಾಖಲಿಸಿದೆ. ದುರ್ಬಲ ಸ್ಕಾಟ್ಲೆಂಡ್ ತಂಡದ ಮೇಲೆ ಸವಾರಿ ಮಾಡಿದ ಟೀಂ ಇಂಡಿಯಾ ಭರ್ಜರಿ ಗೆಲುವು ಕಂಡಿದ್ದಾರೆ. ಇದೇ ಪಂದ್ಯದ ವೇಳೆ ವೇಗಿ ಜಸ್ಪ್ರೀತ್ ಬುಮ್ರಾ ಅವರು ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
ಸ್ಕಾಟ್ಲೆಂಡ್ ವಿರುದ್ಧ ಎರಡು ವಿಕೆಟ್ ಉರುಳಿಸಿದ ಜಸ್ಪ್ರೀತ್ ಹೊಸ ದಾಖಲೆ ಬರೆದರು. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ತನ್ನ ವಿಕೆಟ್ ಗಳಿಕೆಯನ್ನು 64ಕ್ಕೆ ಏರಿಸಿದರು. ಈ ಮೂಲಕ ಭಾರತದ ಪರ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಂಬ ಗೌರವಕ್ಕೆ ಬುಮ್ರಾ ಪಾತ್ರರಾದರು.
ಇದನ್ನೂ ಓದಿ:ಅಫ್ಘಾನ್ ಗೆಲುವಿನಲ್ಲಿದೆ ಟೀಂ ಇಂಡಿಯಾ ಸೆಮಿ ದಾರಿ! ಏನಿದು ಲೆಕ್ಕಾಚಾರ?
ಈ ಹಿಂದೆ ಈ ದಾಖಲೆ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಹೆಸರಲ್ಲಿತ್ತು. ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 63 ವಿಕೆಟ್ ಉರುಳಿಸಿದ್ದಾರೆ. ನಂತರದ ಸ್ಥಾನದಲ್ಲಿ ರವಿ ಅಶ್ವಿನ್ (55 ವಿಕೆಟ್) ಮತ್ತು ಭುವನೇಶ್ವರ್ ಕುಮಾರ್ (50 ವಿಕೆಟ್) ಇದ್ದಾರೆ.
ಶುಕ್ರವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ ಕೇವಲ 85 ರನ್ ಗಳಿಗೆ ಆಲೌಟಾದರೆ, ಭಾರತ ತಂಡ ಕೇವಲ 6.3 ಓವರ್ ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು.