ಮುಂಬೈ: ಹಲವು ಕಾಲದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ ಅವರು ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಇದೇ ವರ್ಷದಲ್ಲಿ ಏಷ್ಯಾ ಕಪ್ ಮತ್ತು ವಿಶ್ವಕಪ್ ಕೂಟಗಳು ನಡೆಯಲಿರುವ ಕಾರಣ ಬುಮ್ರಾ ಯಾವಾಗ ಮರಳಿ ತಂಡ ಸೇರುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಿಗಿದೆ.
ಬೆನ್ನುನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಬುಮ್ರಾ ಆಗಸ್ಟ್ ಅಂತ್ಯದಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಗೆ ತಂಡ ಪ್ರವೇಶಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಹೊಸ ಅಪ್ಡೇಟ್ ಬಂದಿದ್ದು, ಏಷ್ಯಾ ಕಪ್ ಗೆ ಮೊದಲೇ ಬುಮ್ರಾ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬುಮ್ರಾ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. ಹೀಗಾಗಿ ಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ಅವರು ಭಾರತ ತಂಡಕ್ಕೆ ಆಯಾಗಬಹುದು.
ಇದನ್ನೂ ಓದಿ:ಕನ್ವರ್ ಯಾತ್ರಿಗಳ ಮೆರವಣಿಗೆ ವೇಳೆ ವಿದ್ಯುತ್ ಅಪಘಾತ: ಐವರು ಸಾವು
ಏಷ್ಯಾ ಕಪ್ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಆದರೆ ಭಾರತ ಅಭಿಮಾನಿಗಳ ನೋಟ ಆಗಸ್ಟ್ 18 ರಿಂದ ಆಗಸ್ಟ್ 23 ರವರೆಗೆ ನಡೆಯಲಿರುವ ಭಾರತ- ಐರ್ಲೆಂಡ್ ಟಿ20 ಸರಣಿಯ ಮೇಲೆ ಇರಲಿವೆ. ಯಾಕೆಂದರೆ ಬುಮ್ರಾ ಈ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಸರಣಿಯು ಬುಮ್ರಾಗೆ ಫಿಟ್ನೆಸ್ ಪರೀಕ್ಷೆಯಾಗಿ ಇರಲಿದೆ.
ವರದಿಯ ಪ್ರಕಾರ ಬುಮ್ರಾ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಇದೀಗ ಎನ್ ಸಿಎ ನಲ್ಲಿ ದಿನಕ್ಕೆ 8ರಿಂದ 10 ಓವರ್ ಬೌಲಿಂಗ್ ಮಾಡುತ್ತಿದ್ದಾರೆ. ಎನ್ ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಬುಮ್ರಾ ಪ್ರಗತಿಯ ಬಗ್ಗೆ ನಿಗಾ ಇರಿಸಿದ್ದಾರೆ.