ದುಬಾೖ: ಐಸಿಸಿ ಡಿಸೆಂಬರ್ ತಿಂಗಳ ಆಟಗಾರನ ಪ್ರಶಸ್ತಿಗೆ ಜಸ್ಪ್ರೀತ್ ಬುಮ್ರಾ ಹೆಸರು ನಾಮ ನಿರ್ದೇಶಗೊಂಡಿದೆ.
ಕಳೆದ ಬೋರ್ಡರ್-ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಬುಮ್ರಾ ಅಮೋಘ ಬೌಲಿಂಗ್ ಪ್ರದರ್ಶಿಸಿ 32 ವಿಕೆಟ್ ಉರುಳಿಸಿದ್ದರು. ಡಿಸೆಂಬರ್ನಲ್ಲಿ ಆಡಲಾದ 3 ಟೆಸ್ಟ್ಗಳಲ್ಲಿ 22 ವಿಕೆಟ್ ಕೆಡವಿದ ಸಾಧನೆ ಇವರದಾಗಿದೆ.
ತಿಂಗಳ ಆಟಗಾರ ಪ್ರಶಸ್ತಿಗೆ ಸೂಚಿಸ ಲ್ಪಟ್ಟ ಮತ್ತಿಬ್ಬರೆಂದರೆ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ದಕ್ಷಿಣ ಆಫ್ರಿಕಾದ ಸೀಮರ್ ಡೇನ್ ಪ್ಯಾಟರ್ಸನ್.
ಪ್ಯಾಟ್ ಕಮಿನ್ಸ್ ಡಿಸೆಂಬರ್ ತಿಂಗಳ ಟೆಸ್ಟ್ ಪಂದ್ಯಗಳಲ್ಲಿ 17 ವಿಕೆಟ್ ಉಡಾಯಿಸಿದ್ದರು. ಅಡಿಲೇಡ್ನಲ್ಲಿ 57ಕ್ಕೆ 5 ವಿಕೆಟ್ ಉರುಳಿಸಿದ ಸಾಧನೆ ಇವರದಾಗಿತ್ತು. ಈ ಪಂದ್ಯವನ್ನು 10 ವಿಕೆಟ್ಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯ ಸರಣಿಯನ್ನು ಸಮಬಲಕ್ಕೆ ತಂದಿತ್ತು. ಬ್ಯಾಟಿಂಗ್ನಲ್ಲೂ ಮಿಂಚಿದ ಕಮಿನ್ಸ್, ಮೆಲ್ಬರ್ನ್ ಪಂದ್ಯದಲ್ಲಿ 49 ಹಾಗೂ 41 ರನ್ ಮಾಡಿದ್ದರು.
ಡೇನ್ ಪ್ಯಾಟರ್ಸನ್ ಶ್ರೀಲಂಕಾ ವಿರುದ್ಧದ 2 ಟೆಸ್ಟ್ಗಳಲ್ಲಿ 13 ವಿಕೆಟ್ ಉರುಳಿಸಿದ್ದರು.