Advertisement

ಫೋರ್ಬ್ಸ್ ಪಟ್ಟಿ: ಬುಮ್ರಾ ಸೇರಿದಂತೆ ನಾಲ್ವರು ಕ್ರೀಡಾಪಟುಗಳಿಗೆ ಸ್ಥಾನ

06:25 AM Feb 06, 2018 | |

ನವದೆಹಲಿ: ವಿವಿಧ ಕ್ಷೇತ್ರಗಳ 30 ವರ್ಷದೊಳಗಿನ 30 ಭಾರತೀಯರ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿ ನಾಲ್ವರು ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ. ಕ್ರಿಕೆಟಿಗ ಜಸ್‌ಪ್ರೀತ್‌ ಬುಮ್ರಾ, ಮಹಿಳಾ ಕ್ರಿಕೆಟ್‌ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌, ಹಾಕಿ ಆಟಗಾರ್ತಿ ಸವಿತಾ ಪೂನಿಯಾ, ಶೂಟರ್‌ ಹೀನಾ ಸಿಧು ಈ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಚಿಕ್ಕ ವಯಸ್ಸಿನಲ್ಲಿ ಅವರು ಮಾಡಿದ ಸಾಧನೆ, ಮುಂದಿನ ದಿನಗಳಲ್ಲಿ ಅವರ ಬೆಳವಣಿಗೆಯನ್ನು ಪರಿಗಣಿಸಿ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಇವರ ಜತೆಗೆ, ನಟಿ ಭೂಮಿ ಪಡೆ°àಕರ್‌, ಮಿಥಿಲಾ ಪಾಲ್ಕರ್‌, ನಟ ವಿಕ್ಕಿ ಕೌಶಾಲ್‌, ಗಾಯಕ ಜುಬಿನ್‌ ನೌತಿಯಾಲ್‌ ಕೂಡ ಸ್ಥಾನ ಪಡೆದಿದ್ದಾರೆ. 15 ವಿಭಾಗಗಳಲ್ಲಿ “ಫೋರ್ಬ್ಸ್ ಇಂಡಿಯಾ 30 ಅಂಡರ್‌ 30′ ಪಟ್ಟಿಯನ್ನು ತಯಾರಿಸಲಾಗಿದೆ. ಹೆಸರುಗಳನ್ನು ಆಯ್ಕೆ ಮಾಡುವಾಗ 3 ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಅವೆಂದರೆ, ಅವರ ಸಾಧನೆಯ ಪರಿಣಾಮದ ವ್ಯಾಪ್ತಿ, ಅವರಲ್ಲಿರುವ ಯಥಾಸ್ಥಿತಿಯನ್ನು ಬದಲಿಸುವಂಥ ಸಾಮರ್ಥ್ಯ, ಅವರು ಮಾಡುತ್ತಿರುವಂಥ ಕೆಲಸ ಹಾಗೂ ದೀರ್ಘಾವಧಿಯಲ್ಲಿ ಆ ಕೆಲಸದಲ್ಲೇ ಮುಂದುವರಿಯುವಂಥ ಸಾಮರ್ಥ್ಯದ ಆಧಾರದಲ್ಲಿ ಆಯ್ಕೆ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next