Advertisement

ಮಿಚೆಲ್‌ ಮಾರ್ಷ್‌ ಬದಲು ಜಾಸನ್‌ ರಾಯ್‌

11:33 PM Mar 31, 2021 | Team Udayavani |

ಹೊಸದಿಲ್ಲಿ: ಸನ್‌ರೈಸರ್ ಹೈದರಾಬಾದ್‌ ತಂಡದ ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ 2021ರ ಐಪಿಎಲ್‌ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಸುದೀರ್ಘ‌ ಕಾಲ ಜೈವಿಕ ಸುರಕ್ಷಾ ವಲಯದಲ್ಲಿ ಉಳಿಯುವುದು ತ್ರಾಸದಾಯಕ ಎಂಬ ಕಾರಣಕ್ಕಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಮಾರ್ಷ್‌ ಬದಲು ಇಂಗ್ಲೆಂಡಿನ ಆರಂಭಕಾರ ಜಾಸನ್‌ ರಾಯ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

ಮಿಚೆಲ್‌ ಮಾರ್ಷ್‌ 2020ರ ಐಪಿಎಲ್‌ನಲ್ಲಿ ಮೊದಲ ಪಂದ್ಯದ ವೇಳೆಯೇ ಗಾಯಾಳಾಗಿ ಹೊರಬಿದ್ದಿದ್ದರು. 2010ರಲ್ಲಿ ಐಪಿಎಲ್‌ ಪದಾರ್ಪಣೆಗೈದ ಮಾರ್ಷ್‌, ಈ ವರೆಗೆ ಆಡಿದ್ದು 21 ಪಂದ್ಯ ಮಾತ್ರ. ಜಾಸನ್‌ ರಾಯ್‌ 2017ರಲ್ಲಿ ಗುಜರಾತ್‌ ಲಯನ್ಸ್‌ ತಂಡವನ್ನು  ಮೊದಲ ಸಲ ಪ್ರತಿನಿಧಿಸಿದ್ದರು. 2018ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಆಡಿದ್ದರು. ಒಟ್ಟು 8 ಪಂದ್ಯಗಳಿಂದ 179 ರನ್‌ ಗಳಿಸಿದ್ದಾರೆ. ಇದರಲ್ಲೊಂದು ಅರ್ಧ ಶತಕ ಸೇರಿದೆ.

2 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ರಾಯ್‌ ಕಳೆದ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next