ಹೂವಿನಲ್ಲಿರುವ “ಇಂಡೋಲ’ ಎಂಬ ರಾಸಾಯನಿಕ ಪದಾರ್ಥ ಸುಗಂಧಕ್ಕೆ ಕಾರಣವಾಗಿದೆ. ಈ ಹೂವಿನ ಉಪಯೋಗಗಳು ಹೀಗಿವೆ…
Advertisement
* ಮಗುವಿಗೆ ಹಾಲುಣಿಸುವುದನ್ನು ಬಿಡಿಸಲು ಜಾಜಿ ಹೂವನ್ನು ಅರೆದು ಎದೆಗೆ ಲೇಪಿಸಿಕೊಳ್ಳಬಹುದು.* ಮಕ್ಕಳಿಗೆ ಕಜ್ಜಿ-ತುರಿಕೆಗಳಾದಾಗ ಈ ಹೂವಿನ ಎಣ್ಣೆ ಹಚ್ಚಿದರೆ ಗುಣವಾಗುತ್ತದೆ.
* ಜಾಜಿ ಬಳ್ಳಿಯ ಎಲೆಯನ್ನು ಅಗಿದು ತಿಂದರೆ ಬಾಯಿಹುಣ್ಣು ಕಡಿಮೆಯಾಗುತ್ತದೆ.
* ತಲೆಯಲ್ಲಿ, ಮೈಮೇಲೆ ಹುಳುಕಡ್ಡಿಗಳಾದರೆ, ಜಾಜಿ ಎಲೆಯ ರಸ ಹಚ್ಚಿ ತಿಕ್ಕಬೇಕು.
* ಅನಿಯಮಿತ ಮುಟ್ಟಿನ ಸಮಸ್ಯೆಗೆ, ಜಾಜಿ ಎಲೆಯ ರಸ, ಒಂದು ಚಿಟಿಕೆ ಕಾಳುಮೆಣಸಿನಪುಡಿ ಮತ್ತು ಜೇನುತುಪ್ಪ ಬೆರೆಸಿ ಬಳಸಬಹುದು.
* ದೀರ್ಘಕಾಲದ ಜ್ವರಕ್ಕೆ ಜಾಜಿ ಬೇರಿನ ಕಷಾಯ ಕೊಡಬಹುದು.
* ಜಾಜಿ ಹೂವಿನ ರಸ ತೆಗೆದು, ಬಟ್ಟೆಗೆ ಹಾಕಿ, ಕಣ್ಣಿನ ಮೇಲೆ ಒತ್ತಿಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ
* ವಸಡಿನಲ್ಲಿ ರಕ್ತ ಬರುತ್ತಿದ್ದರೆ ಜಾಜಿ ಎಲೆಯನ್ನು ಅಗಿದು ತಿನ್ನಬಹುದು.
* ಸುಟ್ಟ ಗಾಯಗಳಿಗೆ ಜಾಜಿ ಹೂವು ಅಥವಾ ಎಲೆಗಳಿಂದ ತಯಾರಿಸಿದ ಎಣ್ಣೆ ಲೇಪಿಸಿದರೆ ಗುಣವಾಗುತ್ತ