Advertisement
ಅಲನ್ ವಿಲ್ಕಿನ್ಸನ್, ಗಾವಸ್ಕರ್, ಮೆಲ್ ಜೋನ್ಸ್ ಮತ್ತು ಶಾನ್ ಪೋಲಾಕ್ ಅವರನ್ನೊಳಗೊಂಡ ಆಯ್ಕೆ ಸಮಿತಿ ರವಿವಾರ ಈ ಮೂರು ಹೆಸರನ್ನು ಅಂತಿಮಗೊಳಿಸಿತು.
ಜಾಕ್ ಕ್ಯಾಲಿಸ್ ಜಾಗತಿಕ ಕ್ರಿಕೆಟ್ ಕಂಡ ಶ್ರೇಷ್ಠ ಆಲ್‌ರೌಂಡರ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 13,289 ರನ್, ಏಕದಿನದಲ್ಲಿ 11,379 ರನ್ ಸಂಪಾದಿಸಿದ್ದಾರೆ. ಎರಡೂ ಮಾದರಿಗಳಲ್ಲಿ ಕ್ರಮವಾಗಿ 292 ಹಾಗೂ 273 ವಿಕೆಟ್ ಹಾರಿಸಿದ್ದಾರೆ. ಟೆಸ್ಟ್‌ಗಳಲ್ಲಿ 23 ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದು, 45 ಶತಕ ಬಾರಿಸಿದ್ದಾರೆ.
Related Articles
41 ವರ್ಷದ ಲೀಸಾ ಸ್ತಾಲೇಕರ್ ಪುಣೆ ಮೂಲದವರಾಗಿದ್ದು, ಆಸ್ಟ್ರೇಲಿಯದ ಮಾಜಿ ಆಟಗಾರ್ತಿಯಾಗಿದ್ದಾರೆ. 2005 ಮತ್ತು 2013ರ ಏಕದಿನ ವಿಶ್ವಕಪ್ ಹಾಗೂ 2010 ಮತ್ತು 2012ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯೆಯೆಂಬುದು ಇವರ ಪಾಲಿನ ಹೆಗ್ಗಳಿಕೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್ ಮತ್ತು ಸಾವಿರ ರನ್ ಡಬಲ್ಸ್ ಸಾಧಿಸಿದ ಮೊದಲ ಆಟಗಾರ್ತಿ ಎಂಬುದು ಲೀಸಾ ಪಾಲಿನ ಮತ್ತೊಂದು ಸಾಧನೆ.
Advertisement
ಮಾಜಿ ಪಾಕ್ ನಾಯಕ1969-1985ರ ಅವಧಿಯಲ್ಲಿ ಪಾಕಿಸ್ಥಾನದ ಟೆಸ್ಟ್ ತಂಡ ಕಂಡ ಶ್ರೇಷ್ಠ ಆಟಗಾರರಲ್ಲಿ ಜಹೀರ್ ಅಬ್ಟಾಸ್ ಅವರಿಗೆ ವಿಶಿಷ್ಟ ಸ್ಥಾನವಿದೆ. 78 ಟೆಸ್ಟ್ ಆಡಿದ್ದ ಅಬ್ಟಾಸ್ 12 ಶತಕಗಳ ನೆರವಿನೊಂದಿಗೆ 5,062 ರನ್ ಒಟ್ಟುಗೂಡಿಸಿದ್ದಾರೆ. 62 ಏಕ ದಿನ ಪಂದ್ಯಗಳಿಂದ 2,572 ರನ್ ಬಾರಿಸಿದ್ದಾರೆ. ಕ್ರಮವಾಗಿ 12 ಮತ್ತು 7 ಶತಕ ಬಾರಿಸಿದ ಜಹೀರ್ ಅಬ್ಟಾಸ್ ಮಾಜಿ ನಾಯಕರೂ ಹೌದು. ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿಯನ್ನು 2009ರಿಂದ ನೀಡಲು ಆರಂಭಿಸಲಾಗಿತ್ತು. ಸುನೀಲ್ ಗಾವಸ್ಕರ್, ಬಿಷನ್ ಸಿಂಗ್ ಬೇಡಿ, ಕಪಿಲ್‌ದೇವ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡುಲ್ಕರ್ ಈ ಗೌರವಕ್ಕೆ ಪಾತ್ರರಾದ ಭಾರತದ ಕ್ರಿಕೆಟಿಗರಾಗಿದ್ದಾರೆ.