Advertisement

‘ಜಪ್ಪಿನಮೊಗರಿನಿಂದ ಎನ್‌ಎಂಪಿಟಿಗೆ ರಸ್ತೆ’

11:09 AM Dec 22, 2017 | |

ಮಲ್ಲಿಕಟ್ಟೆ: ಜಪ್ಪಿನಮೊಗರಿನ ನೇತ್ರಾವತಿ ಸೇತುವೆಯಿಂದ ನದಿ ಬದಿಯಲ್ಲಿ ಮಂಗಳೂರು ಹಳೆ ಬಂದರು, ಸುಲ್ತಾನ್‌ ಬತ್ತೇರಿ, ತಣ್ಣೀರುಬಾವಿಯಾಗಿ ನವಮಂಗಳೂರು ಬಂದರಿಗೆ ಪರ್ಯಾಯ ಹೆದ್ದಾರಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಜೆ.ಆರ್‌.ಲೋಬೋ ತಿಳಿಸಿದರು. ಅವರು ಮಲ್ಲಿಕಟ್ಟೆಯ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.  ಈ ಯೋಜನೆಗೆ ಸುಮಾರು 1000 ಕೋ. ರೂಪಾಯಿ ಹೂಡಿಕೆಯಾಗಲಿದೆ ಎಂದು ಹೇಳಿದರು.

Advertisement

ಸುಲ್ತಾನ್‌ ಬತ್ತೇರಿಯಲ್ಲಿ ಸೇತುವೆಯನ್ನು ನಿರ್ಮಿಸಿ ತೂಗುಸೇತುವೆ ನಿರ್ಮಾಣವನ್ನು ಕೈಬಿಡಲು ಉದ್ದೇಶಿಸಲಾಗಿದೆ. ಸೇತುವೆ ನಿರ್ಮಾಣವಾದರೆ ತೂಗುಸೇತುವೆಯ ಅಗತ್ಯವಿರುವುದಿಲ್ಲ ಎಂದ ಅವರು ಈ ರಸ್ತೆಯನ್ನು ಬಹೂ ಪಯೋಗಿಸುವ ಉದ್ದೇಶವಿದೆ ಎಂದರು. ಇಲ್ಲಿ ರಸ್ತೆಯಾದರೆ ಮಂಗಳೂರು ಹಳೆ ಬಂದರಿನಲ್ಲಿ ಮೀನುಗಾರಿಕೆ ಪ್ರಗತಿ ಸಾಧ್ಯವಿದೆ, ಪ್ರವಾಸೋದ್ಯಮವೂ ಬೆಳೆಯಲು ಅವಕಾಶವಾಗುವುದು, ಜತೆಗೆ ವಾಹನಗಳ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ಅವರು ವಿವರಿಸಿದರು.

ಈ ರಸ್ತೆಯ ಬಗ್ಗೆ ಸರ್ವೆ, ಅಂದಾಜು ಪಟ್ಟಿ ತಯಾರಿಸಲು ಕನ್ಸಲ್ಟೆಂಟ್‌ ನೇಮಕಮಾಡಿ 2.5 ಕೋಟಿ ರೂಪಾಯಿಯನ್ನು ಒದಗಿಸಲಾಗಿದ್ದು, ಆ ಕೆಲಸವನ್ನು ಕನ್ಸಲ್ಟೆನ್ಸಿಗೆ ಒಪ್ಪಿಸಲಾಗಿದೆ ಎಂದರು. ಇದೇ ರೀತಿಯಲ್ಲಿ ನೇತ್ರಾವತಿ ಸೇತುವೆಯಿಂದ ನದಿ ತೀರದಲ್ಲಿ ಕಣ್ಣೂರು ಮಸೀದಿವರೆಗೆ ಪರ್ಯಾಯ ರಸ್ತೆ ನಿರ್ಮಿಸಿ ಈ ಎರಡೂ ರಸ್ತೆಗಳೂ ಮಂಗಳೂರಿನ ಚಿತ್ರಣವನ್ನೇ ಬದಲಾಯಿಸುತ್ತವೆ ಎಂದು ಅವರು ಹೇಳಿದರು.

ಮಹಾನಗರಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಕೆ.ಎಸ್‌. ಲಿಂಗೇಗೌಡ, ಲೋಕೋಪಯೋಗಿ ಇಲಾಖೆ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next