ಜಪ್ಪಿನಮೊಗರು : ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಾಲ್ಕೂವರೆ ವರ್ಷಗಳಲ್ಲಿ ಸಾಧಿಸಿದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲು ಮನೆ-ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ 4.50 ಕೋಟಿ ಜನರಿಗೆ ಸರಕಾರದ ಕಾರ್ಯಕ್ರಮಗಳನ್ನು ನೇರವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಸಿದ್ದರಾಮಯ್ಯ ಸರಕಾರವು ದೇಶದಲ್ಲಿ ನಂ-1 ಆಗಿ ಮೂಡಿ ಬಂದಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಹೇಳಿದರು. ಜಪ್ಪಿನಮೊಗರು ವ್ಯಾಪ್ತಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಕಾರ ನೀಡಿದ 165 ಭರವಸೆಗಳಲ್ಲಿ 160 ಭರವಸೆಗಳನ್ನು ಈಡೇರಿಸಿದ್ದು, ಉಳಿದ ಭರವಸೆಯನ್ನು ಮುಂದಿನ ದಿನಗಳಲ್ಲಿ ಈಡೇರಿಸಲು ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿಯವರು ಈಗಾಗಲೇ ತಿಳಿಸಿದ್ದಾರೆ. ದೇಶದಲ್ಲಿ 3.5 ವರ್ಷದ ಹಿಂದೆ ಬಂದ ಬಿಜೆಪಿ ಸರಕಾರವು ಜನರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿ ಕೇವಲ ಭರವಸೆ ನೀಡಿದೆಯೇ ಹೊರತು ಜನರಿಗೆ ಯಾವುದೇ ಸಹಾಯ ಮಾಡಿಲ್ಲ ಎಂದವರು ದೂರಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಾಗೇಂದ್ರ ಕುಮಾರ್, ಯುವ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಕಾರ್ಮಿಕ ವಿಭಾಗದ ಸೌತ್ ಬ್ಲಾಕ್ ಅಧ್ಯಕ್ಷ ನವೀನ್ ಸ್ಟೀವನ್, ಸೌತ್ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅನಿಲ್ ತೋರಸ್, ಸಂಗಮ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಕೊಟ್ಟಾರಿ, ಜಪ್ಪಿನಮೊಗರು ಯುವಕ ವೃಂದ ಅಧ್ಯಕ್ಷ ಕೃಷ್ಣ ಶೆಟ್ಟಿ, ಬಜೆಹಿತ್ಲು ನಾಗಬನ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ತಂದೊಳಿಗೆ, ಹಿಂದುಳಿದ ವರ್ಗ ಜಿಲ್ಲಾ ಸಂಚಾಲಕ ಎನ್.ಪಿ. ಮನುರಾಜ್, ಪಕ್ಷದ ನಾಯಕರಾದ ಶೈಲೇಶ್ ಭಂಡಾರಿ, ನೀಲಯ್ಯ ಕರ್ಕೇರ ಎರ್ಮಾಳ್, ಶ್ರೀಧರ್ ರಾಜ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುಭಾಷ್ ವಿ. ಅಡಪ, ಸಂತೋಷ್ ಕೊಟ್ಟಾರಿ, ಉದಯ ಕೊಟ್ಟಾರಿ, ಉಮೇಶ್ ಶೆಟ್ಟಿ, ಶಾಂತಿ ಶೆಟ್ಟಿ, ಜಿ.ಕೆ. ಫ್ರೆಂಡ್ಸ್‌ನ ಗಂಗಾಧರ್ ಕುಡ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.