Advertisement
ಹೀಗೆ ಮನೆಗಳನ್ನು ಕಳೆದುಕೊಂಡು ನಿರ್ಗತಿಕ ರಾಗುವವರಿಗಾಗಿಯೇ ಜಪಾನಿನ ಇಚಿಜೊ ಕೊಮುಟೆನ್ ಎಂಬ ಕಂಪೆನಿ ತೇಲುವ ಮನೆಯನ್ನು ನಿರ್ಮಿಸಿದೆ. ಇದರ ಲಾಭವೇನೆಂದರೆ ಪ್ರವಾಹ ಬಂದಾಗ ಈ ಮನೆ ತೇಲಲು ಆರಂಭಿಸುತ್ತದೆ, ಇಳಿದಾಗ ಮತ್ತೆ ನೆಲಕ್ಕೆ ಬಂದು ನಿಲ್ಲುತ್ತದೆ! ಇದನ್ನು ಒಂದು ಟಿವಿ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕವೂ ಕಂಪೆನಿ ತೋರಿಸಿದೆ. ಜನರು ಅಚ್ಚರಿಪಟ್ಟಿದ್ದಾರೆ.
ನೀರು ನುಗ್ಗಲು ಶುರುವಾದ ಕೂಡಲೇ ನಿಧಾನಕ್ಕೆ ಮನೆ ನೆಲಬಿಟ್ಟು ಎದ್ದೇಳಲು ಆರಂಭಿಸುತ್ತದೆ. ಗರಿಷ್ಠ 5 ಮೀಟರ್‌ವರೆಗೆ ಮನೆ ಮೇಲೆದ್ದು ತೇಲುತ್ತದೆ. ಮನೆಯ ಸುತ್ತ ಬಲವಾದ ಕಬ್ಬಿಣದ ಕಂಬಗಳನ್ನು ಹುಗಿದಿರಲಾಗುತ್ತದೆ. ಈ ಕಂಬಗಳಿಗೆ ಬಲವಾದ ವೈರ್‌ಗಳನ್ನು ಬಿಗಿದು ಅವನ್ನು ಮನೆಗೆ ಕಟ್ಟಿರಲಾಗುತ್ತದೆ. ಪ್ರವಾಹ ಬಂದಾಗ ಮೇಲೇಳುವ ಮನೆ, ಪ್ರವಾಹ ಹೋದಾಗ ನೆಲಕ್ಕಿಳಿಯುತ್ತದೆ.