ಟೊಕಿಯೋ: ಚೀನದ ಕಂಪೆನಿಗಳಿಗೆ ಭಾರತ ಕಠಿನ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇದು ಚೀನ ಸಂಸ್ಥೆಗಳಿಗೆ ನಡುಕ ಹುಟ್ಟಿಸಿದ್ದು, ಚೀನದ ವಸ್ತುಗಳನ್ನು ಯಾರೂ ಕೊಂಡುಕೊಳ್ಳಲು ಮುಂದೆ ಬರುತ್ತಿಲ್ಲ. ಇದರ ಲಾಭ ಪಡೆದುಕೊಳ್ಳಲು ಜಪಾನ್ ಕಂಪೆನಿಗಳು ಮುಂದಾಗಿವೆ.
ಪರಿಣಾಮವಾಗಿ ಜಪಾನ್‌ನ ಸಂಸ್ಥೆಗಳು ಭಾರತದತ್ತ ಮುಖ ಮಾಡಿದ್ದು, ಇವುಗಳಿಗೆ ಜಪಾನ್ ಉತ್ತಮ ಆಫರ್‌ಗಳನ್ನು ಘೋಷಿಸಿದೆ.
ಜಪಾನ್‌ನ ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ (ಎಂಇಟಿಐ ಚೀನದಿಂದ ) ತಮ್ಮ ಉತ್ಪಾದನಾ ತಾಣಗಳನ್ನು ಆಸಿಯಾನ್ ದೇಶಗಳಿಗೆ ಸ್ಥಳಾಂತರಿಸುವ ಕಂಪೆನಿಗಳಿಗೆ ನೆರವನ್ನು ನೀಡಲು ಮುಂದಾಗಿದೆ.
ಚೀನದಲ್ಲಿರುವ ಜಪಾನ್ ಮೂಲದ ಕಂಪೆನಿಗಳು ಭಾರತಕ್ಕೆ ಸ್ಥಳಾಂತರಿಸುವ ಯೋಜನೆ ಇದ್ದರೆ, ಸರಕಾರವೂ ಅದಕ್ಕೆ ಪ್ರೋತ್ಸಾಹ ನೀಡಲಿದೆ ಎಂದು ಜಪಾನ್ ಹೇಳಿದೆ. ಭಾರತದತ್ತ ಮುಖ ಮಾಡುವ ಸಂಸ್ಥೆಗಳಿಗೆ ಹಣಕಾಸಿನ ನೆರವು ಮತ್ತು ಸಬ್ಸಿಡಿ ನೀಡಲಿದೆ. ಚೀನದಲ್ಲಿನ ತಮ್ಮ ಸಂಸ್ಥೆಯನ್ನು ಸ್ಥಳಾಂತರ ಮಾಡಲು ಸಂಸ್ಥೆ ಇಚ್ಚಿಸಿದರೆ ನೆರವನ್ನು ಒದಗಿಸಲು ಜಪಾನ್ ಸಿದ್ಧವಾಗಿದೆ.
ಇದಕ್ಕಾಗಿ 221 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಹಣಕಾಸು ನಿಧಿಯನ್ನು ಮೀಸಲಿರಿಸಿದೆ. ಜಪಾನ್ ಸರಕಾರದ ಈ ನಿರ್ಧಾರ ಭಾರತ ಹಾಗೂ ಬಾಂಗ್ಲಾದೇಶಕ್ಕೆ ಅನ್ವಯವಾಗಲಿದೆ. ಹಾಗೆ ನೋಡಿದರೆ ಜಪಾನ್‌ನ ಈ ನಡೆಗೆ ಕಾರಣವೂ ಇದೆ. ನೆರೆಯ ಜಪಾನ್ ತನ್ನ ಮಾರ್ಕೆಟಿಂಗ್ ಚೈನ್‌ಗೆ ಚೀನವನ್ನೂ ಹೆಚ್ಚು ಅವಲಂಭಿಸಿದೆ. ಈ ಹಿನ್ನೆಲೆಯಲ್ಲಿ ಚೀನದ ಎಲ್ಲ ವಸ್ತುಗಳನ್ನು ಭಾರತದ ನಿಷೇಧಿಸಿದರೆ ತನ್ನ ಮಾರುಕಟ್ಟೆಯನ್ನು ಕಳೆದುಕೊಳ್ಳುವ ಭೀತಿ ಅದಕ್ಕಿದೆ. ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಹಲವು ದೇಶಗಳಲ್ಲಿ ರಫ್ತು ಮತ್ತು ಆಮದು ಸಂಪೂರ್ಣ ಸ್ಥಗಿತಗೊಂಡಿತ್ತು. ಇದಕ್ಕೆ ಜಪಾನ್ ಹೊರತಾಗಿಲ್ಲ. ಚೀನದೊಂದಿಗಿನ ತನ್ನ ವ್ಯಾಪಾರ ಪ್ರಮಾಣ ಕಡಿತವಾದ ಹಿನ್ನೆಲೆಯಲ್ಲಿ ಜಪಾನ್ ಇದೀಗ ಏಷ್ಯಾದತ್ತ ಮುಖ ಮಾಡಿದೆ.
ಸಬ್ಸಿಡಿ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ, ಜಪಾನ್ ಒಂದು ನಿರ್ದಿಷ್ಟ ಪ್ರದೇಶದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮುಂದಾಗಿದೆ. ತುರ್ತು ಪರಿಸ್ಥಿತಿಯಲ್ಲಿಯೂ ವೈದ್ಯಕೀಯ ಸಾಮಗ್ರಿಗಳು ಮತ್ತು ಎಲೆಕ್ಟ್ರಾನಿಕ್ ಘಟಕಗಳ ಸ್ಥಿರ ಪೂರೈಕೆಯನ್ನು ಒದಗಿಸಲು ಸಾಧ್ಯವಾಗುವಂತಹ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ನಿಕ್ಕಿ ಏಷ್ಯನ್ ರಿವ್ಯೂ ವರದಿ ಮಾಡಿದೆ.