Advertisement

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಪ್ರಣಯ್‌ ಕ್ವಾರ್ಟರ್‌ ಫೈನಲಿಗೆ

11:31 PM Jul 27, 2023 | Team Udayavani |

ಟೋಕಿಯೊ: ಭಾರತದ ಎಚ್‌. ಎಸ್‌. ಪ್ರಣಯ್‌ ತನ್ನದೇ ದೇಶದ ಕಿದಂಬಿ ಶ್ರೀಕಾಂತ್‌ ಅವರನ್ನು ಮೂರು ಗೇಮ್‌ಗಳ ಹೋರಾಟದಲ್ಲಿ ಸೋಲಿಸಿ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಕ್ವಾರ್ಟರ್‌ಫೈನಲ್‌ ಹಂತಕ್ಕೆ ತಲುಪಿದ್ದಾರೆ. ಈ ಮೊದಲು ಲಕ್ಷ್ಯ ಸೇನ್‌ ಹಾಗೂ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಸುಲಭ ಗೆಲುವಿನೊಂದಿಗೆ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದರು.

Advertisement

21ರ ಹರೆಯದ ಲಕ್ಷ್ಯ ಸೇನ್‌ ಜಪಾನಿನ ಕಂಟ ಸುನೆಯಾಮ ಅವರನ್ನು 21-14, 21-16 ಗೇಮ್‌ಗಳಿಂದ ಉರುಳಿಸಿ ಅಂತಿಮ ಎಂಟರ ಸುತ್ತಿಗೇರಿದರು. ಕೊರಿಯ ಓಪನ್‌ನ ಡಬಲ್ಸ್‌ ವಿಜೇತ ಸಾತ್ವಿಕ್‌-ಚಿರಾಗ್‌ ಅವರು ನೆದರ್ಲೆಂಡ್ಸ್‌ನ ಲಾಸ್ಸೆ ಮೊಲೆØಡೆ ಮತ್ತು ಜೆಪ್ಪೆ ಬೇ ಅವರನ್ನು 21-17, 21-11 ಗೇಮ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ ತಲುಪಿದರು.

ಭಾರತೀಯ ಆಟಗಾರರ ನಡುವಣ ಹೋರಾಟದಲ್ಲಿ ಪ್ರಣಯ್‌ ಅವರು ಶ್ರೀಕಾಂತ್‌ ಅವರನ್ನು 19-21, 21-9, 21-9 ಗೇಮ್‌ಗಳಿಂದ ಸೋಲಿಸಿ ಮುನ್ನಡೆದರು. ತೀವ್ರ ಪೈಪೋಟಿನ ಮೊದಲ ಸೆಟ್‌ನಲ್ಲಿ ಶ್ರೀಕಾಂತ್‌ ಜಯ ಸಾಧಿಸಿದರೂ ಆಬಳಿಕ ನೀರಸವಾಗಿ ಆಡಿ ಪಂದ್ಯ ಕಳೆದುಕೊಂಡರು.

ವನಿತೆಯರ ಡಬಲ್ಸ್‌ನಲ್ಲಿ ಭಾರತದ ಗಾಯತ್ರಿ ಗೋಪಿಚಂದ್‌ ಮತ್ತು ಟ್ರೆಸ್ಸಾ ಜಾಲಿ ಅವರು ನಮಿ ಮಾಟ್ಸುಯಾಮಾ ಮತ್ತು ಚಿರಾರು ಶಿಡಾ ಅವರೆದುರು 21-23, 19-21 ಗೇಮ್‌ಗಳಿಂದ ಸೋತು ಹೊರಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next