Advertisement

ಮೆಡಲ್‌ ಕಚ್ಚಿದ ಮೇಯರ್‌!

09:04 PM Aug 12, 2021 | Team Udayavani |

ಟೋಕ್ಯೊ: ಈ ಘಟನೆ ನಡೆದದ್ದು ಬೇರೆಲ್ಲೂ ಅಲ್ಲ, ಒಲಿಂಪಿಕ್ಸ್‌ ಆತಿಥೇಯ ನಾಡಾದ ಜಪಾನ್‌ನಲ್ಲಿ! ಮಧ್ಯ ಜಪಾನಿನ ನಗೋಯ ಪಟ್ಟಣದ ಮೇಯರ್‌ ಟಕಾಶಿ ಕವಾಮುರ ಈ ವಿವಾದದ ಕೇಂದ್ರ.

Advertisement

ಕಳೆದ ವಾರದ ಗೆಲುವಿನ ಸಮಾರಂಭವೊಂದರ ವೇಳೆ ಅವರು ವನಿತಾ ಸಾಫ್ಟ್ಬಾಲ್‌ ತಂಡದ ಸ್ಪರ್ಧಿ ಮಿಯು ಗೋಟೊ ಅವರ ಪದಕವನ್ನು ಕಚ್ಚಿ ಹಿಡಿದು, ತಾನೇ ಚಿನ್ನ ಗೆದ್ದಂತೆ ಫೋಸ್‌ ಕೊಟ್ಟರು. ಇದರ ಫೋಟೊ ಎಲ್ಲೆಡೆ ಹರಿದಾಡತೊಡಗಿದ ಬಳಿಕ ತೀವ್ರ ವಿವಾದ ಸ್ವರೂಪ ಪಡೆಯಿತು. ಕೊರೊನಾ ಕಾಲದಲ್ಲೂ ಈ ರೀತಿ ಅಸಭ್ಯವಾಗಿ ವರ್ತಿಸಿದ ಮೇಯರ್‌ ವಿರುದ್ಧ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಟೋಕಿಯೊ ಒಲಿಂಪಿಕ್ಸ್‌ ಆಯೋಜನ ಸಮಿತಿ, ಮಿಯು ಗೋಟೊ ಅವರಿಗೆ ಬೇರೊಂದು ಪದಕವನ್ನು ಬದಲಾಯಿಸಿ ಕೊಡಲು ಮುಂದಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next