Advertisement

ಆರ್ಥಿಕ ಹಿಂಜರಿತದ ಸುಳಿಯಲಿ ಜಪಾನ್‌

03:11 PM Aug 23, 2020 | Suhan S |

ಟೋಕಿಯೋ: ಕೋವಿಡ್ ಕಾರಣಕ್ಕೆ ಏಪ್ರಿಲ್‌ ನಿಂದ ಜುಲೈ ತ್ತೈಮಾಸಿಕದಲ್ಲಿ ಜಪಾನ್‌ ಜಿಡಿಪಿ ಭಾರೀ ಇಳಿಕೆ ಆಗಿದೆ. ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯು ಕಳೆದ ತ್ತೈಮಾಸಿಕಕ್ಕಿಂತ ಶೇ.7.8ರಷ್ಟು ಕುಗ್ಗಿದ್ದು, ಇದನ್ನು ವಾರ್ಷಿಕ ದರಕ್ಕೆ ಬದಲಿಸಿ ಹೇಳಬೇಕೆಂದರೆ ಶೇ.27.8ರಷ್ಟು ಇಳಿಕೆಯಾಗಿದೆ. 1980ರ ಆಧುನಿಕ ದಾಖಲೆಗಳಲ್ಲೇ ಈ ಬಾರಿಯದು ಅತ್ಯಂತ ಹೀನಾಯ ಕುಸಿತ ಹಾಗೂ ಸತತ ಮೂರನೇ ತ್ತೈಮಾಸಿಕ ಈ ರೀತಿ ಕುಗ್ಗಿದೆ ಎಂದು ವರದಿ ಹೇಳಿದೆ.

Advertisement

ಎಪ್ರಿಲ್ ಜುಲೈ ತ್ತೈಮಾಸಿಕ ಅವಧಿಯ ಉಳಿದ ಪ್ರಮುಖ ಆರ್ಥಿಕತೆಯ ದೇಶಗಳಿಗೆ ಹೋಲಿಸಿದರೆ ಜಪಾನ್‌ ಸ್ಥಿತಿ ಉತ್ತಮವಾಗಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಜಾರಿ ಮಾಡಿದ ಲಾಕ್‌ಡೌನ್‌ ಕ್ರಮಗಳಿಂದ ರಫ್ತು ಪ್ರಮಾಣ ಕಡಿಮೆಆಗಿರುವುದು ಆರ್ಥಿಕ ಹಿಂಜರಿತಕ್ಕೆ ಪ್ರಮುಖ ಕಾರಣವಾಗಿದೆ.  ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಆರು ವಾರಗಳ ಕಾಲ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದರಿಂದ ವ್ಯಾಪಾರ- ವ್ಯವಹಾರಗಳಿಗೆ ಭರ್ತಿ ಪೆಟ್ಟು ಬಿದ್ದಿದ್ದು, ಜೂನ್‌ ಹಾಗೂ ಜುಲೈನಲ್ಲಿ ಮತ್ತೆ ಚಟುವಟಿಕೆಗಳು ಆರಂಭವಾದರೂ ಚೇತರಿಕೆ ವೇಗದ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಜಪಾನ್‌ ಸರಕಾರವು ಜುಲೈ ಮಧ್ಯ ಭಾಗದಲ್ಲಿ ಸಬ್ಸಿಡಿ ಯೋಜನೆಗಳನ್ನು ಘೋಷಿಸಿ, ದೇಶೀಯ ಪ್ರವಾಸೋದ್ಯಕ್ಕೆ ಉತ್ತೇಜನ ನೀಡಲು ಯೋಜನೆ ರೂಪಿಸಿತು. ಆದರೆ ಆಗಸ್ಟ್ ತಿಂಗಳೊಂದರಲ್ಲೇ 19 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆಯಾಗಿ ಪತ್ತೆಯಾದ ಕೋವಿಡ್ ಸೋಂಕಿತ ಪ್ರಕರಣಗಳು 57 ಸಾವಿರ ಗಡಿ ದಾಟಿ ಮುನ್ನುಗುತ್ತಿದೆ. ಹಾಗೇ ಇಲ್ಲಿಯವರೆಗೂ ದೇಶದಲ್ಲಿ 1,128 ಮಂದಿ ಸಾವನ್ನಪ್ಪಿದ್ದಾರೆ.

ಕೆನಡಾ ಜಿಡಿಪಿ ಶೇ.12ರಷ್ಟು ಕುಂಠಿತ ಸಾಧ್ಯತೆ  : ಎಪ್ರಿಲ್ ಜುಲೈ ತ್ತೈಮಾಸಿಕ ಅವಧಿಯ ಉಳಿದ ಪ್ರಮುಖ ಆರ್ಥಿಕತೆಯ ದೇಶಗಳಿಗೆ ಹೋಲಿಸಿದರೆ ಜಪಾನ್‌ ಸ್ಥಿತಿ ಉತ್ತಮವಾಗಿದ್ದು, ಯು. ಎಸ್‌. ಹಾಗೂ ಜರ್ಮನಿ ಕಳೆದ ತ್ತೈಮಾಸಿಕಕ್ಕಿಂತ ತಲಾ ಶೇ.10ರಷ್ಟು ಇಳಿಕೆ ಕಂಡಿವೆ. ಇನ್ನು ಯುನೈಟೆಡ್‌ ಕಿಂಗ್‌ ಡಮ್‌ ಉತ್ಪಾದನೆ ಈ ಹಿಂದಿನ ಅವಧಿಗಿಂತ ಶೇ.20.4ರಷ್ಟು ಕಡಿಮೆ ಆಗಿದೆ. ಜಿ7 ರಾಷ್ಟ್ರಗಳ ಆರ್ಥಿಕತೆ ಪೈಕಿ ಕೆನಡಾ ಜಿಡಿಪಿ ಹಿಂದಿನ ತ್ತೈಮಾಸಿಕಕ್ಕಿಂತ ಶೇ.12ರಷ್ಟು ಕುಗ್ಗಬಹುದು ಎಂದು ನಿರಿಕ್ಷಿಸಲಾಗಿದ್ದು, ಕೆನಡಾ ದೇಶಕ್ಕೂ ಆರ್ಥಿಕ ಹಿಂಜರಿತದ ಭೀತಿ ಶುರುವಾಗಿದೆ. ಇನ್ನು ಚೀನ ಎರಡನೇ ತ್ತೈಮಾಸಿಕದಲ್ಲಿ ವ್ಯಾಪಾರ ವಹಿವಾಟು ಚಟುವಟಿಕೆಗಳಲ್ಲಿ ಕೊಂಚ ಮಟ್ಟಿಗಿನ ಚೇತರಿಕೆ ಕಂಡಿದ್ದು, ಆರ್ಥಿಕರ ದರ ಬೆಳವಣಿಗೆ ಕಾಣುತ್ತಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next