Advertisement

ಥಾಯ್ಲೆಂಡ್‌ ವಿರುದ್ಧ 3-0 ಗೆಲುವು ಉಬರ್‌ ಕಪ್‌ ಗೆದ್ದ ಜಪಾನ್‌

06:30 AM May 27, 2018 | Team Udayavani |

ಬ್ಯಾಂಕಾಕ್‌: ಆತಿಥೇಯ ಥಾಯ್ಲೆಂಡ್‌ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡಿದ ಜಪಾನ್‌ ವನಿತೆಯರು 2018ನೇ ಸಾಲಿನ “ಉಬರ್‌ ಕಪ್‌’ ಬ್ಯಾಡ್ಮಿಂಟನ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement

ಶನಿವಾರದ ಕಾಳಗದಲ್ಲಿ ಜಪಾನ್‌ 3-0 ಅಂತರದಿಂದ ಥಾಯ್ಲೆಂಡ್‌ಗೆ ಸೋಲುಣಿಸಿತು. ಇದು 1981ರ ಬಳಿಕ ಜಪಾನ್‌ಗೆ ಒಲಿದ ಮೊದಲ ಉಬರ್‌ ಕಪ್‌ ಪ್ರಶಸ್ತಿ ಎಂಬುದು ವಿಶೇಷ.

ಮೊದಲ ಸಿಂಗಲ್ಸ್‌ನಲ್ಲಿ ಅಕಾನೆ ಯಮಾಗುಚಿ 21-15, 21-19 ಅಂತರದಿಂದ ಥಾಯ್ಲೆಂಡಿನ ಸ್ಟಾರ್‌ ಆಟಗಾರ್ತಿ ರಚನೋಕ್‌ ಇಂತಾನನ್‌ ಅವರನ್ನು ಮಣಿಸಿ ಜಪಾನಿಗೆ 1-0 ಮುನ್ನಡೆ ಒದಗಿಸಿದರು. ಬಳಿಕ ವಿಶ್ವದ ನಂ.2 ಡಬಲ್ಸ್‌ ಜೋಡಿಯಾದ ಯುಕಿ ಫ‌ುಕುಶಿಮಾ-ಸಯಾಕಾ ಹಿರೋಟಾ ಜಯ ಸಾಧಿಸಿತು. ಕೊನೆಯಲ್ಲಿ ನೊಜೊಮಿ ಒಕುಹರಾ 21-12, 21-9 ಅಂತರದಿಂದ ನಿಚೋನ್‌ ಜಿಂದಾಪೊಲ್‌ ಅವರಿಗೆ ಸೋಲುಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next