Advertisement

Japan vs Jigarthanda DoubleX: ಎರಡು ದೊಡ್ಡ ಸಿನಿಮಾ; ಮೊದಲ ದಿನ ಗಳಿಸಿದ್ದೆಷ್ಟು?

04:03 PM Nov 11, 2023 | Team Udayavani |

ಚೆನ್ನೈ: ಕಾಲಿವುಡ್‌ ನಲ್ಲಿ ಈ ವಾರ ಎರಡು ದೊಡ್ಡ ಸಿನಿಮಾಗಳು ರಿಲೀಸ್‌ ಆಗಿವೆ. ಆ ಮೂಲಕ ದೀಪಾವಳಿ ಹಬ್ಬಕ್ಕೆ ಫ್ಯಾನ್ಸ್‌ ಗಳಿಗೆ ಭರಪೂರ ಮನರಂಜನೆ ಸಿಗೋದು ಗ್ಯಾರೆಂಟಿ ಆಗಿದೆ.

Advertisement

ಒಂದೆಡೆ ಕಾರ್ತಿ ಅವರ ಬಹು ನಿರೀಕ್ಷಿತ ʼಜಪಾನ್‌ʼ ಸಿನಿಮಾ ರಿಲೀಸ್‌ ಆಗಿದ್ದರೆ, ಇನ್ನೊಂದೆಡೆ ರಾಘವ ಲಾರೆನ್ಸ್ ಮತ್ತು ಎಸ್‌ಜೆ ಸೂರ್ಯ ಅವರʼ ಜಿಗರ್ತಾಂಡ ಡಬಲ್ ಎಕ್ಸ್ʼ ಸಿನಿಮಾ ರಿಲೀಸ್‌ ಆಗಿದೆ. ಸಿನಿಮಾ ರಿಲೀಸ್‌ ಆಗಿ ಒಂದು ದಿನ ಕಳೆದಿದೆ. ಆ ಮೂಲಕ ಮೊದಲ ದಿನದ ಬಾಕ್ಸ್‌ ಆಫೀಸ್‌ ಗಳಿಕೆಯ ಲೆಕ್ಕಚಾರವೂ ಜೋರಾಗಿದೆ.

‘ಪೊನ್ನಿಯಿನ್ ಸೆಲ್ವನ್-1’ ಸಿನಿಮಾದಿಂದ ಗೆಲುವಿನ ಕುದುರೆ ಏರಿದ್ದ ಕಾರ್ತಿ ʼಜಪಾನ್‌ʼ ಮೂಲಕ ಮೋಡಿ ಮಾಡಲು ಹೊರಟಿದ್ದಾರೆ. ದರೋಡೆಯ ಕಥೆಯನ್ನೊಳಗೊಂಡಿರುವ ರಾಜು ಮುರುಗನ್ ನಿರ್ದೇಶನದ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಿನಿಮಾದ ಬಗ್ಗೆ ಕೆಲ ಪ್ರೇಕ್ಷಕರು ಸಾಮಾನ್ಯ ಅಭಿಪ್ರಾಯವನ್ನು ನೀಡಿದ್ದಾರೆ. ಆಮೆ ಗತಿಯ ಬಾಕ್ಸ್‌ ಆಫೀಸ್‌ ಗಳಿಕೆಯನ್ನು‌ ಪಡೆದುಕೊಂಡಿರುವ ʼಜಪಾನ್‌ʼ ಮೊದಲ ದಿನ 2.50 ಕೋಟಿ ರೂಪಾಯಿಯ ಕಮಾಯಿಯನ್ನು ಮಾಡಿದೆ.

ಇದನ್ನೂ ಓದಿ: Thalaivar 171: 32 ವರ್ಷದ ಬಳಿಕ ರಜಿನಿಕಾಂತ್‌ ಸಿನಿಮಾದಲ್ಲಿ ಮಮ್ಮುಟ್ಟಿ?

Advertisement

ಕಾರ್ತಿ, ಸುನಿಲ್, ಕೌಶಿಕ್ ಮಹಾತಾ, ಅನು ಇಮ್ಯಾನುಯೆಲ್, ವಿಜಯ್ ಮಿಲ್ಟನ್, ಸುನಿಲ್ ಕುಮಾರ್ ತ್ರಿಪಾಠಿ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನೊಂದೆಡೆ ರಿಲೀಸ್‌ ಆಗಿರುವ ಕಾರ್ತಿಕ್‌ ಸುಬ್ಬರಾಜ್‌ ಅವರ ಬಹು ನಿರೀಕ್ಷಿತ  ʼ ಜಿಗರ್ತಾಂಡ ಡಬಲ್ ಎಕ್ಸ್ʼ ಸಿನಿಮಾಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ಕೇಳಿ ಬರುತ್ತಿದೆ. ಟ್ರೇಲರ್‌ ಮೂಲಕ ಹೈಪ್‌ ಹೆಚ್ಚಿಸಿದ ಸಿನಿಮಾ, ಮೊದಲ ದಿನದ ಗಳಿಕೆಯಲ್ಲೂ, ಪ್ರೇಕ್ಷಕರ ಅಭಿಪ್ರಾಯದಲ್ಲೂ ಸದ್ದು ಮಾಡಿದೆ.

ಕಾರ್ತಿಕ್‌ ಸುಬ್ಬರಾಜ್‌ ಅವರ ಈ ಸಿನಿಮಾ 1975 ರ ಕಥೆಯನ್ನೊಳಗೊಂಡಿದೆ. ಗ್ಯಾಂಗ್‌ಸ್ಟರ್ ಪಾಂಡಿಯನ್‌ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಮೊದಲ ದಿನ 1.75 ಕೋಟಿಯ ಗಳಿಕೆಯನ್ನು ಸಿನಿಮಾ ಮಾಡಿರುವುದಾಗಿ ವರದಿಯಾಗಿದೆ.

ದೀಪಾವಳಿ ಹಬ್ಬದ ವೀಕೆಂಡ್‌ ನಲ್ಲಿ ಎರಡೂ ಸಿನಿಮಾದ ಗಳಿಕೆ ಹೆಚ್ಚಾಗುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next