Advertisement

ಟಾಲಿವುಡ್‌ಗೆ ಶ್ರೀದೇವಿ ಪುತ್ರಿ ಜಾಹ್ನವಿ ಎಂಟ್ರಿ: ಹುಟ್ಟು ಹಬ್ಬಕ್ಕೆ ಫಸ್ಟ್‌ ಲುಕ್‌ ರಿಲೀಸ್

12:27 PM Mar 06, 2023 | Team Udayavani |

ಮುಂಬಯಿ: ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ ಗಿಂದು ಹುಟ್ಟುಹಬ್ಬದ ಸಂಭ್ರಮ. ತನ್ನ ಮೋಹಕ ನೋಟ, ನಟನೆಯಿಂದ ಬಾಲಿವುಡ್‌ ನಲ್ಲಿಆರಂಭಿಕ ಹೆಜ್ಜೆಗಳನ್ನಿಡುತ್ತಿರುವ ಜಾಹ್ನವಿ ಟಾಲಿವುಡ್‌ ಗೆ ಎಂಟ್ರಿ ಆಗುತ್ತಿದ್ದಾರೆ ಎನ್ನುವ ಮಾತುಗಳು ಕೆಲ ದಿನಗಳಿಂದ ಬಿಟೌನ್‌ ನಲ್ಲಿ ಹರಿದಾಡುತ್ತಿತ್ತು. ಇದೀಗ ಈ ಸುದ್ದಿ ಅಧಿಕೃತವಾಗಿದೆ.

Advertisement

‘ಧಡಕ್’ ಸಿನಿಮಾದಿಂದ ಬಿಟೌನ್‌ ಗೆ ಎಂಟ್ರಿಯಾದ ಜಾಹ್ನವಿ ʼ ಗುಂಜನ್ ಸಕ್ಸೇನಾʼ, ʼಮಿಲಿʼ,ʼಗುಡ್‌ ಲಕ್‌ ಜೆರಿʼ ಸಿನಿಮಾದಲ್ಲಿನ ನಟನೆಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಂದು ಜಾಹ್ನವಿ ಕಪೂರ್‌ ಹುಟ್ಟು ಹಬ್ಬ ( ಮಾ.6 ರಂದು) ತನ್ನ ನೆಚ್ಚಿನ ನಟಿಗೆ ಅಭಿಮಾನಿಗಳಿಂದ ಹುಟ್ಟು ಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ: ಡಬ್ಲ್ಯೂಪಿಎಲ್ 2023; ಮೊದಲ ಪಂದ್ಯದಲ್ಲೇ ಎಂಎಸ್ ಧೋನಿಗೆ ಗೌರವ ಸಲ್ಲಿಸಿದ ಕಿರಣ್ ನವಗಿರೆ

ಜೂ.ಎನ್‌ ಟಿರ್‌ ಅವರ 30ನ ಸಿನಿಮಾದಲ್ಲಿ ಜಾಹ್ನವಿ ಅವರ ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಕೊರಟಾಲ ಶಿವ ನಿರ್ದೇಶನದ ಪ್ಯಾನ್‌ ಇಂಡಿಯಾ  ‘NTR30’ ಸಿನಿಮಾದಲ್ಲಿ ಜಾಹ್ನವಿ ಕಪೂರ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಹುಟ್ಟು ಹಬ್ಬಕ್ಕೆ ಸಿನಿಮಾ ತಂಡ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದೆ. ಸೀರೆಯುಟ್ಟು ಕೂತಿರುವ ಜಾಹ್ನವಿ ಸಖತ್‌ ಗ್ಲಾಮರಸ್‌ ಆಗಿಯೂ ಕಾಣಿಸುತ್ತಾರೆ. ಫೋಸ್ಟರ್‌ ಹಂಚಿಕೊಂಡು ಟಾಲಿವುಡ್‌ ಗೆ ಎಂಟ್ರಿ ಆಗುತ್ತಿರುವ ಖುಷಿಯನ್ನು ಜಾಹ್ನವಿ ಹಂಚಿಕೊಂಡಿದ್ದಾರೆ.

ಸದ್ಯ ಜಾಹ್ನವಿ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಾಲಿವುಡ್‌ ನಲ್ಲಿ ವರುಣ್‌ ಧವನ್‌ ರೊಂದಿಗೆ ʼ ಬವಾಲ್ʼ ರಾಜಕುಮಾರ್‌ ರಾವ್‌ ಯೊಂದಿಗೆ ಶ್ರೀ ಮತ್ತು ʼಮಿ. ಆ್ಯಂಡ್ ಮಿಸೆಸ್‌ ಮಹಿʼ‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next