Advertisement

ಪದೇ ಪದೆ ಮುಚ್ಚುವ ಜನೌಷಧ ಮಳಿಗೆ ಇದ್ದರೆಷ್ಟು ಬಿಟ್ಟರೆಷ್ಟು 

01:18 PM Feb 08, 2022 | Team Udayavani |

ಎಚ್‌.ಡಿ.ಕೋಟೆ: ಪಟ್ಟಣದಲ್ಲಿ ಜನೌಷಧ (ಜೆನೆರಿಕ್‌) ಮಳಿಗೆ ಕಳೆದು ಒಂದು ವಾರದಿಂದಬಾಗಿಲು ಹಾಕಿದ್ದು, ಈ ಮಳಿಗೆಯನ್ನೇ ಅವಲಂಬಿ ಸಿದ್ದ ಔಷಧ ಅಗತ್ಯವುಳ್ಳವರು ಪರಾಡುತ್ತಿದ್ದಾರೆ.ಮೆಡಿಕಲ್‌ ಸ್ಟೋರ್‌, ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ಕೊಟ್ಟು ಔಷಧ ಖರೀದಿಸುತ್ತಿದ್ದಾರೆ.

Advertisement

ಬೇಕಾಬಿಟ್ಟಿ ನಿರ್ವಹಣೆಯಿಂದ ರಿಯಾಯಿತಿ ದರದಲ್ಲಿ ಜನರಿಗೆ ಔಷಧ ತಲುಪಿಸುವ ಜನೌಷಧ ಕೇಂದ್ರದ ಆಶಯವೇ ಈಡೇರುತ್ತಿಲ್ಲ. ಹೆಸರಿಗೆ ಮಾತ್ರ ಮಳಿಗೆ ಇದೆ. ಆದರೆ, ಸಮರ್ಪಕವಾಗಿ ಸಕಾಲದಲ್ಲಿ ಜನರಿಗೆ ಮಾತ್ರಗಳೇ ಸಿಗುತ್ತಿಲ್ಲ. ಹೀಗೆ ಪದೇ ಪದೆ ವಾರಗಟ್ಟಲೆ ಮಳಿಗೆಗೆ ಬೀಗ ಜಡಿಯು ವುದಾರೆ, ಇದನ್ನೇ ಏಕೆ ತೆರೆಯಬೇಕಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಪಕ್ಕೆ ಮಳಿಗೆ: ಜನರ ಆರೋಗ್ಯದ ದೃಷ್ಟಿಯಿಂದ ಕಡಿಮೆ ಬೆಲೆಗೆ ಸುಮಾರು 1,498 ವಿವಿಧ ಬಗೆಯ ಔಷಧಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನೌಷಧ ಕೇಂದ್ರ ನೆಪಕ್ಕೆ ಮಾತ್ರ ಇದೆ.

ಫ‌ಲಕ ಇಲ್ಲ: ಸಾರ್ವಜನಿಕ ಆಸ್ಪತ್ರೆ ಕಟ್ಟಡದಆವರಣದಲ್ಲಿ ನಾಲ್ಕೈದು ವರ್ಷಗಳಿಂದಆರಂಭಿಸಿರುವ ಜನೌಷಧ ಕೇಂದ್ರದಲ್ಲಿ ಇಂದಿಗೂ ನಾಮಫ‌ಲಕ ಅಳವಡಿಸಿಲ್ಲ. ಯಾವುದೋಗೋಡನ್‌ ಮಳಿಗೆ ರೀತಿ ಕಾಣುತ್ತಿದೆ. ಇಲ್ಲಿ ಜನೌಷಧ ಕೇಂದ್ರ ಇದೆ ಎಂಬುದೇ ಬಹುತೇಕ ಜನರಿಗೆ ಗೊತ್ತಿಲ್ಲ. ಇದು ಜನೌಷಧ ಕೇಂದ್ರ ಎಂದು ಅರಿತ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇಲ್ಲಿ ಔಷಧ ಖರೀದಿಸುವರು. ನಿಯಮಾನುಸಾರ ಈ ಜನೌಷಧ ಕೇಂದ್ರದಲ್ಲಿ 1,498 ಬಗೆಯ ಮಾತ್ರೆಗಳನ್ನು ಮಾರಾಟ ಮಾಡಬೇಕು ಎಂಬ ನಿಯಮವನ್ನು ಇಲ್ಲಿ ಪಾಲಿಸುತ್ತಿಲ್ಲ.

ಕನಿಷ್ಠ 100ಬಗೆಯ ಔಷಧಗಳು ಕೂಡ ಇಲ್ಲಿ ಲಭ್ಯವಿಲ್ಲ.ಹೋಗಲಿ ಇದ್ದದ್ದರಲ್ಲೇ ತೃಪ್ತಿ ಪಟ್ಟುಕೊಳ್ಳೋಣಎಂದು ರಕ್ತದೊತ್ತಡ (ಬಿಪಿ) ಹಾಗೂ ಮಧುಮೇಹ(ಸಕ್ಕರೆ ಕಾಯಿಲೆ) ಮತ್ತಿತರರ ಕಾಯಿಲೆ ಇರುವ ಮಂದಿ ಔಷಧ ಖರೀದಿಸಲು ಈ ಕೇಂದ್ರಕ್ಕೆಆಗಮಿಸಿದರೆ ನಿರಾಶೆಯಿಂದ ಹಿಂದಿರುಗುತ್ತಾರೆ.ಈ ಔಷಧ ಕೇಂದ್ರ ಬಾಗಿಲು ತೆರೆದು ಸೇವೆ ನೀಡುವುದಕ್ಕಿಂತ ಬಾಗಿಲು ಮುಚ್ಚಿರುವ ದಿನಗಳೇ ಹೆಚ್ಚು.

Advertisement

ಬೇಕಾಬಿಟ್ಟಿ ನಿರ್ವಹಣೆ: ಜೊತೆಗೆ ಈ ಮಳಿಗೆ ಯಾವಾಗ ಬಾಗಿಲು ತೆರೆಯುತ್ತದೆ, ಯಾವಾಗಬಾಗಿಲು ಮುಚ್ಚಬೇಕು ಎಂಬ ನಿಯಮ ಪಾಲನೆ ಇಲ್ಲಿಲ್ಲ. ಬಾಗಿಲು ತೆಗೆದಾಗ ಮಾತ್ರೆಖರೀದಿಸಬೇಕು. ಬೇಕಾದಾಗ ಬಾಗಿಲು ತೆರೆದುಬೇಡವಾದಾಗ ಬಾಗಿಲು ಮುಚ್ಚುವ ಇಂತಹ ಜನೌಷಧ ಕೇಂದ್ರ ಏಕೆ ಬೇಕಿತ್ತು ಎಂದು ಸ್ಥಳೀಯನಿವಾಸಿ ಪ್ರಭು ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ.ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳುಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ಈಜನೌಷಧ ಕೇಂದ್ರ ಸಮರ್ಪಕವಾಗಿಕಾರ್ಯನಿರ್ವಹಿಸುವಂತೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜನೌಷಧ ಕೇಂದ್ರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಮಹಿಳಾಸಿಬ್ಬಂದಿಗೆ ಹೆರಿಗೆಯಾಗಿದೆ. ಈ ಕುರಿತುಸಂಬಂಧ ಪಟ್ಟ ಗುತ್ತಿಗೆದಾರರಿಗೆತಿಳಿಸಿದಾಗ ಸ್ಥಳೀಯ ಅರ್ಹರೊಬ್ಬರನ್ನು ನಿಯೋಜಿಸಿದರೆ ವೇತನ ನೀಡುವಭರವಸೆ ನೀಡಿದ್ದಾರೆ. ಶೀಘ್ರಅರ್ಹರೊಬ್ಬರನ್ನು ನಿಯೋಜಿಸಲು ಕ್ರಮವಹಿಸಲಾಗುವುದು. – ಡಾ| ಸೋಮಣ್ಣ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ

 

– ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next