Advertisement

ಜನೌಷಧ ಜತೆ ವಾಕಿಂಗ್‌ ಮಾಡಿ: ಸಚಿವ ಶಂಕರ್‌

05:36 PM Mar 08, 2021 | Team Udayavani |

ರಾಣಿಬೆನ್ನೂರ: ಕೋಟ್ಯಂತರ ಬಡವರಿಗೆ ಅಗ್ಗದ ದರದಲ್ಲಿ ಯೋಗ್ಯ ಔಷಧ ನೀಡಿ ಅವರ ಆರೋಗ್ಯ ಸುಧಾರಣೆಗೆ ಕಾರಣರಾದ ಕೇಂದ್ರ ಸಚಿವ ದಿ. ಅನಂತಕುಮಾರ ಅವರು, ಬಡವರ ಪಾಲಿನಪಿತಾಮಹರೆನಿಸಿಕೊಂಡು ಇಂದಿಗೂಜನಮಾನಸದಲ್ಲಿ ಉಳಿದಿದ್ದಾರೆ ಎಂದು ತೋಟಗಾರಿಕಾ ಮತ್ತು ರೇಷ್ಮೆ ಖಾತೆ ಸಚಿವ ಆರ್‌.ಶಂಕರ್‌ ಹೇಳಿದರು.

Advertisement

ರವಿವಾರ ಸ್ಥಳೀಯ ವಾಗೀಶ ನಗರದಲ್ಲಿ ಹಾವೇರಿ ಜಿಲ್ಲಾ ಜನ ಔಷಧ ಕೇಂದ್ರದ ಮಾಲಿಕರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ 3ನೇ ವರ್ಷದ ಜನೌಷಧ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜನೌಷ ಧದ ಜೊತೆಗೆ ದಿನಂಪ್ರತಿವಾಕಿಂಗ್‌, ಪ್ರಾಣಾಯಾಮ,  ಯೋಗಾಸನಗಳನ್ನು ಮುನ್ನಡೆಸಿ ಕೊಂಡು ಬಂದರೆ ಉತ್ತಮ ಆರೋಗ್ಯ ಹಾಗೂ ಆಯುಷ್ಯವನ್ನು ಪಡೆಯಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಾವೇರಿ ಜಿಲ್ಲಾ ಜನೌಷಧ  ದಿವಸ್‌ ಮಿತ್ರ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ದೇಶದಲ್ಲಿ 7599 ಜನೌಷಧ ಕೇಂದ್ರಗಳಿದ್ದು, ರಾಜ್ಯದಲ್ಲಿ 750 ಕ್ಕೂ ಹಾಗೂ ಜಿಲ್ಲೆಯಲ್ಲಿ 25 ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ದಿ. ಅನಂತಕುಮಾರರ ಕನಸಿನ ಕೂಸಾದ ಈ ಜನೌಷಧ ಕೇಂದ್ರಗಳಿಂದ ಇಂದು ಬಡವರು, ಶ್ರೀಸಾಮಾನ್ಯರು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ನಗರಸಭಾ ಅಧ್ಯಕ್ಷೆ ರೂಪಾ ರಾಘವೇಂದ್ರ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಸಿದ್ದಪ್ಪಚಿಕ್ಕಬಿದರಿ, ಡಾ.ಬಿ.ಆರ್‌. ಸಾವಕಾರ, ನಗರಸಭಾ ಸದಸ್ಯರಾದಕೆಎಂಪಿ ಮಣಿ, ಹುಚ್ಚಪ್ಪ ಮೇಡ್ಲೆರಿ, ಹಬೀಬುಲ್ಲಾ ಕಂಬಳಿ, ಮಾಳಪ್ಪಪೂಜಾರ, ಸಂಘದ ಪದಾಧಿಕಾರಿಗಳು, ಜನೌಷಧ ವಿತರಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next