Advertisement
ಪೆಟ್ರೋಲ್ ಬಂಕ್, ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ- ಬಸ್ ಸಂಚಾರ ಎಲ್ಲಾ ಹೋಟೆಲ್, ಬಾರ್ ಗಳು ಬಂದ್ ಆಗಿವೆ. ಖಾಸಗಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರಿಲ್ಲದೆ ನಿಲ್ದಾಣಗಳು ಬಿಕೋ ಎನ್ನುತ್ತಿದೆ.
Related Articles
Advertisement
ರಾಜ್ಯದ ಬೇರೆ ಬೇರೆ ಭಾಗದಿಂದ ಬಂದವರು ಬಸ್ ಇಲ್ಲದೇ ಪರದಾಟ ನಡೆಸುತ್ತಿರುವ ದೃಶ್ಯವೂ ಕೆಲವೆಡೆ ಕಂಡುಬರುತ್ತಿದೆ. ಆ ಮೂಲಕ ಜನತಾ ಕರ್ಫ್ಯೂ ಮಾಹಿತಿ ಇದ್ದರೂ ಬಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ವ್ಯಕ್ತಿಗಳು ಆಟೋ, ಲಾರಿ, ಟೆಂಪೊ ಹತ್ತಿ ಮನೆಗೆ ಪ್ರಯಾಣಿಸುತ್ತಿದ್ದಾರೆ. ದೂರದ ಊರುಗಳಿಗೆ ತೆರಳಲು ಕೂಡ ಜನರು ಕಷ್ಟ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.