ಬೆಂಗಳೂರು: ಸರಕಾರದ ವತಿಯಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾಶೀರ್ವಾದ ಯಾತ್ರೆ ಕೈಗೊಂಡರೆ ಅದರಲ್ಲಿ “ಕೆಪಿಸಿಸಿ ಅಧ್ಯಕ್ಷ’ನಾಗಿ ಪಾಲ್ಗೊಳ್ಳುವುದಿಲ್ಲ ಎಂದು ಡಾ| ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾಶೀರ್ವಾದ ಯಾತ್ರೆ ಯನ್ನು ಸರಕಾರದ ವತಿಯಿಂದ ನಡೆಸಬೇಕಾ ಅಥವಾ ಪಕ್ಷದ ವತಿ ಯಿಂದ ನಡೆಸಬೇಕಾ ಎನ್ನುವ ಕುರಿತಂತೆ ಒಂದು ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಒಂದು ವೇಳೆ ಮುಖ್ಯಮಂತ್ರಿ ಸರಕಾರದ ವತಿಯಿಂದ ಜನಾಶೀರ್ವಾದ ಯಾತ್ರೆ ಕೈಗೊಂಡರೆ, ಕೆಪಿಸಿಸಿ ಅಧ್ಯಕ್ಷನಾಗಿ ಆ ಯಾತ್ರೆಯಲ್ಲಿ ಪಾಲ್ಗೊಳ್ಳುವು ದಿಲ್ಲ. ತುಮಕೂರು ಜಿಲ್ಲೆಗೆ ಯಾತ್ರೆ ಬಂದಾಗ ವಿಧಾನ ಪರಿಷತ್ ಸದಸ್ಯ ನಾಗಿ ಯಾತ್ರೆಯಲ್ಲಿ ಪಾಲ್ಗೊಳ್ಳುವು ದಾಗಿ ಹೇಳಿದ ಪರಮೇಶ್ವರ್, ಮುಖ್ಯಮಂತ್ರಿಯ ಜನಾಶೀರ್ವಾದ ಯಾತ್ರೆಗೆ ಪರ್ಯಾಯ ಯಾತ್ರೆ ಮಾಡುತ್ತೇನೆ ಎಂದು ನಾನು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.ಬಿಜೆಪಿ ಹಾಗೂ ಜೆಡಿಎಸ್ ಯಾತ್ರೆಗಳಿಗೆ ಪರ್ಯಾಯವಾಗಿ ಯಾತ್ರೆಯನ್ನೇ ನಡೆಸಬೇಕೆಂದು ನಾವೇನೂ ನಿರ್ಧರಿಸಿಲ್ಲ.
ಸಮಾವೇಶಗಳನ್ನು ಮಾಡಿಯೇ ಜನರನ್ನು ತಲುಪಬೇಕಿಲ್ಲ. ಈಗಾಗಲೇ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಮೂಲಕ ಮತದಾರರನ್ನು ತಲುಪಿ ದ್ದೇವೆ. ಚುನಾವಣೆಗೆ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಬೇರೆ ಯದೇ ಆದ ಕಾರ್ಯತಂತ್ರ ರೂಪಿಸಿದೆ. ಮುಖ್ಯಮಂತ್ರಿ ಸರಕಾರದ ಸಾಧನೆಗಳನ್ನು ತೆಗೆದುಕೊಂಡು ಜನರ ಬಳಿಗೆ ತೆರಳಿ ಜನಾಶೀರ್ವಾದ ಪಡೆದರೆ, ಪಕ್ಷದ ನಾಯಕರು ಜಿಲ್ಲಾ ಮಟ್ಟದಲ್ಲಿ ಸಮಾವೇಶ ಮಾಡಿ ಜನರಿಗೆ ಪಕ್ಷದ ಕಾರ್ಯಕ್ರಮಗಳನ್ನು ತಿಳಿಸುತ್ತೇವೆ ಎಂದು ಹೇಳಿದರು.
ಭಿನ್ನಾಭಿಪ್ರಾಯ ಇಲ್ಲ: ಸಿಎಂ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದ ಪರಮೇಶ್ವರ್, ಕೆಲವರು ನಮ್ಮ ನಡುವೆ ಒಡಕುಂಟು ಮಾಡಲು ಯತ್ನಿಸಿದ್ದಾರೆ ಎಂದರು.