Advertisement
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಅವರವರ ಸಿದ್ಧಾಂತಗಳ ಮೇಲೆ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರುವುದು ವಿಷಾದನೀಯ. ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಪುಲೆಯಂತವರ ವಿಚಾರಗಳನ್ನು ಮುಂದಿಟ್ಟುಕೊಂಡು ವ್ಯವಸ್ಥೆ ವಿರುದ್ಧ ಸಾಹಿತ್ಯ ಚಳವಳಿ ಆಗಬೇಕು ಎಂದರು.
ನನ್ನ ತಂದೆ-ತಾಯಿ ಈಗಲೂ ಅಮೆರಿಕದಲ್ಲಿದ್ದಾರೆ. ಸಂದರ್ಭ ಬಂದರೆ ನಾನೂ ಅಲ್ಲಿಗೆ ಹೋಗಬೇಕಾಗುತ್ತದೆ. ಸದ್ಯ ಹೋಗುವ ಯೋಚನೆ ಇಲ್ಲ. ಈಗ ಪೌರತ್ವ ಪಡೆದರೆ ಚುನಾವಣೆಗೆ ಸ್ಪರ್ಧಿಸಲು ಪಡೆದಿದ್ದಾರೆ ಎಂದು ಟೀಕಿಸುತ್ತಾರೆ. ನನಗೆ ಮತದಾನದ ಹಕ್ಕು ಹಾಗೂ ಸರಕಾರಿ ನೌಕರನಾಗಲು ಅರ್ಹತೆ ಇರುವುದಿಲ್ಲ. ನಾನು ದೇವದಾಸಿ ಮಹಿಳೆಯರು, ಕಾರ್ಮಿಕರು, ಬಡವರು, ದಲಿತರು ಒಳಗೊಂಡು ಸಮಾಜಮುಖೀ ಚಟುವಟಿಕೆಯಲ್ಲಿ ತೊಡಗಿಕೊಳ್ಳುವೆ. ಚುನಾವಣೆ ಮುಗಿದ ಬಳಿಕ ಪೌರತ್ವ ಪಡೆಯುವ ಬಗ್ಗೆ ಚಿಂತನೆ ಮಾಡುವುದಾಗಿ ಚೇತನ್ ತಿಳಿಸಿದರು.