Advertisement
“ಡಾ| ಜೀ.ಶಂ.ಪ. ತಜ್ಞ’ ಪ್ರಶಸ್ತಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ, ಕರ್ನಾಟಕ ಜಾನಪದ ವಿ.ವಿ.ಯ ನಿವೃತ್ತ ಉಪಕುಲಪತಿ ಡಾ| ಕೆ. ಚಿನ್ನಪ್ಪ ಗೌಡ ಮತ್ತು “ಡಾ| ಬಿ.ಎಸ್. ಗದ್ದಗಿಮಠ ತಜ್ಞ’ ಪ್ರಶಸ್ತಿಗೆ ಹೊಸಪೇಟೆಯ ನಿವೃತ್ತ ಪ್ರಾಧ್ಯಾಪಕ ಡಾ| ಮಂಜುನಾಥ್ ಬೇವಿನಕಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ತಜ್ಞ ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಮತ್ತು ಪ್ರಶಸ್ತಿ, ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿ ತಲಾ 25 ಸಾವಿರ ರೂ. ನಗದು ಮತ್ತು ಪುರಸ್ಕಾರವನ್ನು ಒಳಗೊಂಡಿದೆ.
* ಕೆ.ಎಂ. ರಾಮಯ್ಯ, ಬೆಂಗಳೂರು ದಕ್ಷಿಣ (ಏಕತಾರಿ, ತಂಬೂರಿ ಪದಗಳು)
* ಓಬಮ್ಮ, ದೊಡ್ಡಬಳ್ಳಾಪುರ (ಸೋಬಾನೆ ಪದ)
* ರಂಗಯ್ಯ, ಮಾಗಡಿ (ಪಟ ಕುಣಿತ)
* ತೋಪಣ್ಣ, ಕೋಲಾರ (ಕೀಲು ಕುದುರೆ ಕುಣಿತ)
* ದೊಡ್ಡ ಕೂರ್ಲಪ್ಪ, ಚಿಕ್ಕಬಳ್ಳಾಪುರ (ತಮಟೆ ವಾದನ)
* ಕದರಮ್ಮ, ಕೊರಟಗೆರೆ (ಜಾನಪದ ಹಾಡುಗಾರ್ತಿ)
* ಕಾಟಮ್ಮ, ಜಗಳೂರು (ಕಥನ ಕಾವ್ಯ)
* ಸಿರಿಯಮ್ಮ, ಚಳ್ಳಕೆರೆ (ಮಹಾಕಾವ್ಯ)
* ಟೀಕಪ್ಪ, ಸಾಗರ (ಡೊಳ್ಳು ಕುಣಿತ)
* ದೇವಕಿ ಕೆ.ಸಿ., ವೀರಾಜಪೇಟೆ (ಊರ್ಟಿ ಕೋಟ್ ಆಟ)
* ಗುರುಬಸವಯ್ಯ, ಮಳವಳ್ಳಿ (ತಂಬೂರಿ ಪದ)
* ವೀರಭದ್ರಯ್ಯ, ಅರಕಲಗೂಡು (ತಣ್ತೀಪದ ಗಾಯನ ಮತ್ತು ಏಕತಾರಿ ತಂಬೂರಿಗಳ ತಯಾರಕ)
* ನಾಗರಾಜಪ್ಪ ವೈ.ಪಿ., ಕಡೂರು (ಕರಡಿಗೆ ವಾದ್ಯ ಕಲಾವಿದ)
* ಗುರುಸಿದ್ಧಯ್ಯ, ನಂಜನಗೂಡು (ತಂಬೂರಿ ಪದ)
* ಶ್ರೀಮತಿ ಅಪ್ಪಿ, ಉಡುಪಿ (ಜನಪದ ಸೂಲಗಿತ್ತಿ)
* ಲೀಲಾವತಿ, ಪುತ್ತೂರು (ನಾಟಿವೈದ್ಯ)
* ಗೌರಮ್ಮ, ಯಳಂದೂರು (ಸೋಬಾನೆ ಪದ ಅಂಥ ಕಲಾವಿದರು)
* ಶಿವನಪ್ಪ ಚಂದರಗಿ, ಬೈಲಹೊಂಗಲ (ಡೊಳ್ಳು ಕುಣಿತ)
* ಹನಮಂತ ವೆಂಕಪ್ಪ ಸುಗತೇಕರ, ಬಾಗಲಕೋಟೆ (ಗೊಂದಳಿ ಪದ)
* ಇಮಾಂಬಿ ಇಮಾಮಸಾಬ ದೊಡ್ಡಮನಿ, ಸಿಂದಗಿ (ತಣ್ತೀಪದ)
* ಬಸಪ್ಪ ಹಡಗಲಿ, ಗದಗ (ಗೀಗೀ ಪದ)
* ದಳವಾಯಿ ಚಿತ್ತಪ್ಪ, ಸಂಡೂರು (ಜನಪದ ಮಹಾ ಕಾವ್ಯಗಳು)
* ಸಾವಕ್ಕಾ ಓಲೇಕಾರ, ಶಿಗ್ಗಾವಿ (ಸೋಬಾನೆ, ಸಂಪ್ರದಾಯದ ಪದ)
* ಈರಯ್ಯ ಮೊಗೇರ, ಭಟ್ಕಳ (ಕಾರಿನ್ ಮನೆ ಕುಣಿತ-ಹೌಂದೇರಾಯನ ಕುಣಿತ)
* ಅಕ್ಕಮ್ಮ, ಸೇಡಂ (ಸಂಪ್ರದಾಯದ ಪದ)
* ಏಸಪ್ಪಾ, ಬೀದರ (ಶಹನಾಯಿ ವಾದಕರು)
* ಶಾಂತಮ್ಮ, ಮಸ್ಕಿ (ಬುರ್ರಕಥೆ)
* ರೇವಣಪ್ಪ, ಯಲಬುರ್ಗಾ (ಡೊಳ್ಳಿನ ಹಾಡು, ಕುಣಿತ)
* ಡಾ| ರಾಮಪ್ಪ ಬಸವಂತಪ್ಪ ಮೂಲಗಿ, ಹುಬ್ಬಳ್ಳಿ (ಹಂತಿ ಪದ)
* ಅಮರಯ್ಯಸ್ವಾಮಿ ಹಿರೇಮಠ, ಸುರಪುರ (ಭಜನೆ) 2022ನೇ ಸಾಲಿನ ಪುಸ್ತಕ ಬಹುಮಾನ
ಬಿ.ಎಸ್. ಸ್ವಾಮಿ ಬೆಂಗಳೂರು, ಡಾ| ಕುರುವ ಬಸವರಾಜು ಬೆಂಗಳೂರು ಮತ್ತು ಡಾ| ನಾಗ ಎಚ್. ಹುಬ್ಳಿ, ಝಾರ್ಖಂಡ್
Related Articles
ವ.ನಂ. ಶಿವರಾಮು, ಮೈಸೂರು ಮತ್ತು ಡಾ| ವಿಜಯಶ್ರೀ ಸಬರದ, ಬೆಂಗಳೂರು
Advertisement