Advertisement
ಸ್ಥಳೀಯ ಪುರಸಭೆ ಆವರಣದಲ್ಲಿ ಜನಾಂದೋಲನ ಮಹಾಮೈತ್ರಿಯಿಂದ ಹಮ್ಮಿಕೊಂಡಿದ್ದ ಜನಾಧಿಕಾರಕ್ಕಾಗಿ ಜನರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಇದಕ್ಕೆ ಬಿಜೆಪಿ ಕೂಡ ಹೊರತಾಗಿಲ್ಲ. ಬಿಜೆಪಿ ಕೋಮು ಸೌಹಾರ್ದ ಕೆಡಿಸುವ ಹುನ್ನಾರ ನಡೆಸಿದೆ. ಅಲ್ಪಸಂಖ್ಯಾತರ, ದಲಿತರ ಮತ್ತು ಹಿಂದುಳಿದ ವರ್ಗಗಳ ಆಹಾರ ಪದ್ಧತಿ ಟೀಕಿಸುತ್ತಾ ಗೋರಕ್ಷಣೆ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಕಪ್ಪು ಧನಿಕರು ಬ್ಯಾಂಕ್ ಹಿಂಬಾಗಿಲಿನಿಂದ ಕಪ್ಪು ಹಣವನ್ನು ಬಿಳಿಯಾಗಿಸಿಕೊಂಡರು. ಪ್ರತಿಯೊಂದು ಬಾಷಣದಲ್ಲಿ ನನಗೆ 60 ತಿಂಗಳನ್ನ ಕೊಡಿ ಸಾಕು, ನಾನು ದೇಶದ ಚೌಕಿದಾರನಾಗಿ ಸೇವೆ ಮಾಡುತ್ತೇನೆ ಅಂತ ಹೇಳುತ್ತಾರೆ. ಆದರೆ ನೀರವ್ ಮೋದಿ, ವಿಜಯ ಮಲ್ಯರಂತಹ ಉದ್ಯಮಿಗಳು ದೇಶದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದರೂ, ನಮ್ಮ ದೇಶದ ಚೌಕಿದಾರ ಪ್ರಧಾನಿ ನೋಡಿಕೊಂಡು ಸುಮ್ಮನೆ ಕೂಡುತ್ತಾರೆ ಎಂದು ಟೀಕಾಪ್ರಹಾರ ನಡೆಸಿದರು. ಮತದಾರರು ಈ ಬಾರಿ ಜನಾಂದೋಲನ ಮಹಾಮೈತ್ರಿ ಅಭ್ಯರ್ಥಿಗಳಿಗೆ ಆಶೀರ್ವದಿಸುವ ಮೂಲಕ ಪರ್ಯಾಯ ಶಕ್ತಿ ಸೃಷ್ಟಿಗೆ ಮುಂದಾಗಬೇಕು ಎಂದು
ಕರೆ ನೀಡಿದರು. ಮುಖಂಡರಾದ ಎಂ.ಆರ್. ಬೇರಿ, ಅಮರಣ್ಣ ಗುಡಿಹಾಳ, ರಾಘವೇಂದ್ರ ಕುಷ್ಟಗಿ, ತಾಜುದ್ದೀನ್ ಹುಮನಾಬಾದ, ಎಂ.ಡಿ. ಅಮೀರ ಅಲಿ, ಜಿ. ಶೇಖರಯ್ಯ, ಕೆ.ನಾಗಲಿಂಗಸ್ವಾಮಿ, ಜಿ.ತಿಪ್ಪರಾಜ, ಅಬ್ದುಲ್ ಹಮೀದ್, ಡಿ.ಜಿ. ಶಿವು, ವೆಲ್ಫೆಧೀರ್ ಪಾರ್ಟಿ ಮುಖಂಡರು ಇದ್ದರು.