Advertisement

ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

11:58 PM Jan 04, 2025 | Team Udayavani |

ಬೆಳ್ತಂಗಡಿ: ಗೋವಿನ ತಲೆ,ಮೃತದೇಹ, ಚರ್ಮ, ಮೂಳೆ ಮೊದಲಾದ ಅವಶೇಷಗಳನ್ನು ಮೃತ್ಯುಂಜಯ ನದಿಗೆ ಎಸೆದ ಘಟನೆಯನ್ನು ಖಂಡಿಸಿ ವಿಹಿಂಪ ಮತ್ತು ಬಜರಂಗ ದಳದವರು ಜ. 6ರಂದು ಕಕ್ಕಿಂಜೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

Advertisement

ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಅನ್ನಾರು ಸೇತುವೆ ಬಳಿ ಮೃತ್ಯುಂಜಯ ನದಿಗೆ ಡಿ.17ರಂದು ಕಿಡಿಗೇಡಿಗಳು 11 ಗೋಣಿ ಚೀಲಗಳಲ್ಲಿ ಗೋಮಾಂಸದ ಅವಶೇಷ ಹಾಗೂ ಕರುವಿನ ಮೃತದೇಹವನ್ನು ಎಸೆದಿರುವುದು ಕಂಡುಬಂದಿತ್ತು.

ಜ.3ರಂದು ಉಜಿರೆಯ ಶಾರದಾ ಮಂಟಪದಲ್ಲಿ ಜರಗಿದ ಸಭೆಯಲ್ಲಿ ಹಿಂದೂ ಸಂಘಟನೆಗಳು ಭಾಗವಹಿಸಿ ಜ.6ರಂದು ಕಕ್ಕಿಂಜೆಯಲ್ಲಿ ನಡೆಯಲಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿವೆ. ಡಿ.30ರಂದು ಕಕ್ಕಿಂಜೆಯಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಒಂದು ವಾರದೊಳಗೆ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಪೊಲೀಸ್‌ ಇಲಾಖೆ ತಿಳಿಸಿದ್ದ ಕಾರಣ ಮುಂದೂಡಲಾಗಿತ್ತು ಎಂದು ಬಜರಂಗದಳ ತಾಲೂಕು ಅಧ್ಯಕ್ಷ ದಿನೇಶ್‌ ಚಾರ್ಮಾಡಿ ತಿಳಿಸಿದ್ದಾರೆ.

ದೇಗುಲ ಅಪವಿತ್ರ ಉದ್ದೇಶ
ನದಿ ಪರಿಸರದಲ್ಲಿ ಧರ್ಮಸ್ಥಳ, ಪಜಿರಡ್ಕ ಸಹಿತ ಅನೇಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿದ್ದು, ಅವುಗಳನ್ನು ಅಪವಿತ್ರಗೊಳಿಸುವ ಹುನ್ನಾರ ಇದರ ಹಿಂದಿದೆ. ಜತೆಗೆ ಪ್ರತಿನಿತ್ಯ ಅಯ್ಯಪ್ಪ ವ್ರತಧಾರಿಗಳು ಸ್ನಾನಕ್ಕೆ ಬರುವಂಥ ಜಾಗದಲ್ಲೇ ಉದ್ದೇಶಪೂರ್ವಕ ವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನದಿಯಲ್ಲಿ ಗೋವಿನ ಮೃತದೇಹ ಪತ್ತೆ ಆಗಿರುವ ಬಗ್ಗೆ ಈ ಹಿಂದೆ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next