Advertisement

ಜಮ್ಮು-ದಿಲ್ಲಿ ತುರಂತೋ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರ ದರೋಡೆ

06:28 AM Jan 17, 2019 | Team Udayavani |

ಹೊಸದಿಲ್ಲಿ : ಜಮ್ಮು – ದಿಲ್ಲಿ ತುರಂತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಶಸ್ತ್ರ ದರೋಡೆಕೋರರು ಇಂದು ಗುರುವಾರ ಪ್ರಯಾಣಿಕರಿಗೆ ಚೂರಿ ತೋರಿಸಿ ಪ್ರಾಣ ಬೆದರಿಕೆ ಒಡ್ಡಿ ನಗ-ನಗದು ಸೊತ್ತುಗಳನ್ನು ಲೂಟಿ ಮಾಡಿರುವುದಾಗಿ ವರದಿಯಾಗಿದೆ.

Advertisement

ದರೋಡೆಗೆ ಗುರಿಯಾದ ಪ್ರಯಾಣಿಕರೋರ್ವರು ರೈಲ್ವೆಯ ಕಂಪ್ಲೇಂಟ್‌ ಪೋರ್ಟಲ್‌ ಮೂಲಕ ದೂರು ದಾಖಲಿಸಿದಾಗಲೇ ರೈಲಿನಲ್ಲಿ ದರೋಡೆ ನಡೆದ ವಿಷಯ ಬೆಳಕಿಗೆ ಬಂತು.

12266 ನಂಬರ್‌ ನ ರೈಲು ದಿಲ್ಲ ಸರಾಯ್‌ ರೊಹಿಲ್ಲಾ ಸ್ಟೇಶನ್‌ ಸಮೀಪಿಸುತ್ತಿದ್ದಂತೆಯೇ ಬಿ3 ಮತ್ತು ಬಿ7 ಕೋಚ್‌ ಗಳ ಪ್ರಯಾಣಿಕರನ್ನು ಗುರಿ ಇರಿಸಿ ಸಶಸ್ತ್ರ ದರೋಡೆಕೋರರು ಲೂಟಿ ಮಾಡಿದರು ಎಂದು ದೂರುದಾರ ಅಶ್ವನಿ ಕುಮಾರ್‌ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. 

ಆರ್‌ಪಿಎಫ್ ದಳಕ್ಕೆ ಈ ಬಗ್ಗೆ ಸ್ವಲ್ಪ ಮಾಹಿತಿ, ಸುಳಿವು ಸಿಕ್ಕಿದ್ದು ಅತ್ಯಂತ ಕ್ಷಿಪ್ರವಾಗಿ ದರೋಡೆಕೋರರನ್ನು ಪತ್ತೆ ಹಚ್ಚಿ ಸೆರೆ ಹಿಡಿಯುವ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉತ್ತರ ರೈಲ್ವೇ ಅಧಿಕಾರಿಯೋರ್ವರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next