Advertisement

ಗೋ-ಏರ್‌ನಲ್ಲಿ ತಾಂತ್ರಿಕ ದೋಷ: ಲೇಹ್‌ಗೆ ಮರಳಿದ ವಿಮಾನ

12:16 PM Feb 24, 2018 | Team Udayavani |

ಜಮ್ಮು : 112 ಪ್ರಯಾಣಿಕರನ್ನು  ಮತ್ತು ಚಾಲಕ ಸಿಬಂದಿಗಳನ್ನು ಒಳಗೊಂಡು ಜಮ್ಮು ಗೆ ಹೋಗುತ್ತಿದ್ದ ಗೋ-ಏರ್‌ ವಿಮಾನ ಟೇಕಾಫ್ ಆದ ಹತ್ತೇ ನಿಮಿಷಗಳಲ್ಲಿ  ತಾಂತ್ರಿಕ ಸಮಸ್ಯೆಗೆ ಗುರಿಯಾಗಿ, ಒಡನೆಯೇ ಲೇಹ್‌ ವಿಮಾನ ನಿಲ್ದಾಣಕ್ಕೆ ಮರಳಿದ ಘಟನೆ ವರದಿಯಾಗಿದೆ.

Advertisement

ದಿಲ್ಲಿ – ಲೇಸ್‌ – ಜಮ್ಮು ಪ್ರಯಾಣದ ಗೋ-ಏರ್‌ ವಿಮಾನವು ಇಂದು ಬೆಳಗ್ಗೆ 9.20ರ ಹೊತ್ತಿಗೆ ಲಡ್ಡಾಕ್‌ ಪ್ರಾಂತ್ಯದಲ್ಲಿನ ಲೇಹ್‌ ವಿಮಾನ ನಿಲ್ದಾಣದಿಂದ ಜಮ್ಮವಿಗೆ ಹೊರಟಿತ್ತು. ಟೇಕಾಫ್ ಆದ ಹತ್ತೇ ನಿಮಿಷಗಳಲ್ಲಿ ಅದು ತಾಂತ್ರಿಕ ತೊಂದರೆಗಳಿಗೆ ಗುರಿಯಾಗಿ ಲೇಹ್‌ಗೆ ಮರಳಿತು ಎಂದು ಗೋ-ಏರ್‌ ಅಧಿಕಾರಿಗಳು ತಿಳಿಸಿದ್ದಾರೆ. 

ವಿಮಾನದಲ್ಲಿ ತಾಂತ್ರಿಕ ತೊಂದರೆಗಳನ್ನು ದುರಸ್ತಿ ಮಾಡಲು ದಿಲ್ಲಿಯಿಂದ ತಜ್ಞ ಇಂಜಿನಿಯರ್‌ಗಳು ಹೊರಟ್ಟಿದ್ದಾರೆ. ಆದರೆ ವಿಮಾನವು ತನ್ನ ಮುಂದಿನ ಪ್ರಯಾಣವು ನಾಳೆ ಭಾನುವಾರವಷ್ಟೆ ಕೈಗೊಳ್ಳಲು ಸಾಧ್ಯವಾದೀತು ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next