Advertisement

ಬಾಲಕಿಯ ರೇಪ್‌ ಮಾಡಿ ಕಣ್ಣು ಕಿತ್ತು ಕೊಲೆ: ಮಲತಾಯಿ ಸೇರಿ ಐವರ ಸೆರೆ

12:13 PM Sep 05, 2018 | udayavani editorial |

ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಒಂಬತ್ತು ವರ್ಷ ಪ್ರಾಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕಣ್ಣು  ಕಿತ್ತು, ಅಮಾನುಷವಾಗಿ ಕೊಂದಿರುವ ಘಟನೆ ನಡೆದಿದೆ. 

Advertisement

ಪೊಲೀಸರು ಈ ಸಂಬಂಧ ಬಾಲಕಿಯ ಮಲ ತಾಯಿ ಮತ್ತು ಮಲ ಸಹೋದರ ಸೇರಿದಂತೆ ಐವರನ್ನು ಬಂಧಿಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಬಾಲಕಿಯು ಕಳೆದ ಆ.23ರಂದು ನಾಪತ್ತೆಯಾಗಿದ್ದಳು. ಉರಿ ನಿವಾಸಿಯಾಗಿರುವ ಆಕೆಯ ತಂದೆ ಮಗಳ ನಾಪತ್ತೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಮೊನ್ನೆ ಭಾನುವಾರ ಬಾಲಕಿಯ ಕೊಳೆತ ಶವವು ಅರಣ್ಯದ ಸಮೀಪ ಪತ್ತೆಯಾಯಿತು. ಇದನ್ನು ಕೊಲೆ ಪ್ರಕರಣವೆಂದು ಪೊಲೀಸರು ದಾಖಲಿಸಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next