Advertisement

ಕುಪ್‌ವಾರಾ ಸೇನಾ ಕಾರ್ಯಾಚರಣೆ: 4 ಪಾಕ್‌ ನುಸುಳುಕೋರರ ಹತ್ಯೆ

11:43 AM Apr 10, 2017 | Team Udayavani |

ಕುಪ್‌ವಾರಾ : ಭಾರತದ ಗಡಿಯೊಳಗೆ ನುಸುಳಿಬರಲು  ಯತ್ನಿಸುತ್ತಿದ್ದ  ನಾಲ್ವರು ಪಾಕಿಸ್ಥಾನೀ ನುಸುಳುಕೋರರನ್ನು ಭಾರತೀಯ ಯೋಧರು ಇಂದು ಸೋಮವಾರ ಗುಂಡಿಕ್ಕಿ ಸಾಯಿಸಿದ್ದಾರೆ.

Advertisement

ಕೇರಾನ್‌ ವಲಯದಲ್ಲಿಂದು ಎನ್‌ಕೌಂಟರ್‌ ನಡೆದಿತ್ತು. 

ಕೇರಾನ್‌ ವಲಯದ ಉದ್ದಕ್ಕೂ ಇರುವ ಗಡಿಯಲ್ಲಿ ನಸುಳಲು ಯತ್ನಿಸಿಉತ್ತಿದ್ದ ಪಾಕ್‌  ನುಸುಳುಕೋರರನ್ನು ತಡೆಯಲು ಭಾರತೀಯ ಯೋಧರು ನಿನ್ನೆ ಭಾನುವಾರದಂದಲೇ ಕಾರ್ಯಾಚರಣೆ ನಡೆಸುತ್ತಿರು ಎಂದು ರಕ್ಷಣಾ ವಕ್ತಾರ ಕರ್ನಲ್‌ ರಾಜೇಶ್‌ ಕಾಲಿಯಾ ತಿಳಿಸಿದ್ದಾರೆ. 

ಇಂದು ಕಾರ್ಯಾಚರಣೆಯಲ್ಲಿ ನಾಲ್ವರು ಪಾಕ್‌ ನುಸುಳುಕೋರರನ್ನು ಗುಂಡಿಕ್ಕಿ ಸಾಯಿಸಿದೊಡನೆಯೇ ಇಡಿಯ ಪ್ರದೇಶವನ್ನು ಭಾರತೀಯ ಯೋಧರು ಸುತುವರಿದು ಇನ್ನಷ್ಟು ನುಸುಳುಕೋರರು ಒಳನುಗ್ಗಿ ಬಂದಿರಬಹುದೇ ಎಂಬುದನ್ನು ಪರೀಕ್ಷಿಸಿದರು. 

ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿರುವುದಗಿ ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next