Advertisement

ಜಮ್ಮು ಕಾಶ್ಮೀರ ಡಿಜಿಪಿ ವೈದ್‌ ವರ್ಗಾವಣೆ, ದಿಲ್‌ಬಾಗ್‌ಗೆ ಅಧಿಕಾರ

11:02 AM Sep 07, 2018 | Team Udayavani |

ಜಮ್ಮು : ಜಮ್ಮು ಕಾಶ್ಮೀರದ ಡಿಜಿಪಿ ಎಸ್‌ಪಿ ವೈದ್‌ ಅರನ್ನು ವರ್ಗಾಯಿಸಲಾಗಿದ್ದು ದಿಲ್‌ಬಾಗ್‌ ಸಿಂಗ್‌ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

Advertisement

ವೈದ್‌ ಅವರು 1986 ಬ್ಯಾಚಿನ ಐಪಿಎಸ್‌ ಅಧಿಕಾರಿ. ಇವರನ್ನು 2016ರ ಡಿಸೆಂಬರ್‌ನಲ್ಲಿ ಡಿಜಿಪಿ ಆಗಿ ನೇಮಿಸಲಾಗಿತ್ತು. 2019ರ ಅಕ್ಟೋಬರ್‌ನಲ್ಲಿ ಇವರು ನಿವೃತ್ತರಾಗಲಿದ್ದಾರೆ. 

ವೈದ್‌ ಅವರನ್ನು ಸಾರಿಗೆ ಆಯುಕ್ತರಾಗಿ ನಿಯೋಜಿಸಲಾಗಿದೆ.ಪೊಲೀಸ್‌ ಮಹಾ ನಿರ್ದೇಶಕ (ಬಂದೀಖಾನೆ) ದಿಲ್‌ಬಾಗ್‌ ಸಿಂಗ್‌ ಅವರು ವೈದ್‌ ಸ್ಥಾನದಲ್ಲಿ ಅಧಿಕಾರ ವಹಿಸಿಕೊಳ್ಳುತ್ತಾರೆ.

ಈ ಸಂಬಂಧ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ಆರ್‌ ಕೆ ಗೋಯಲ್‌ ಅವರು ಆದೇಶ ಹೊರಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next