Advertisement

ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ ಜೂನ್‌ನಲ್ಲಿ: 6-8 ಹಂತ

10:47 AM Mar 16, 2019 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರ ವಿಧಾನಸಭಾಚುನಾವಣೆಯನ್ನು ಪವಿತ್ರ ರಮ್‌ಜಾನ್‌ ತಿಂಗಳ ಬಳಿಕ ಮತ್ತು ವಾರ್ಷಿಕ ಅಮರನಾಥ ಯಾತ್ರೆ ಆರಂಭವಾಗುವುದಕ್ಕೆ ಮುನ್ನ ನಡೆಸಲಾಗುವುದೆಂದು ಉನ್ನತ ಮೂಲಗಳು ಇಂದು ಶನಿವಾರ ತಿಳಿಸಿವೆ.

Advertisement

ಮಾಧ್ಯಮಗಳಿಗೆ ತಿಳಿದು ಬಂದಿರುವ ಪ್ರಕಾರ ನಿರ್ಣಾಯಕ ಜಮ್ಮು ಕಾಶ್ಮೀರ ವಿಧಾಸಭಾ ಚುನಾವಣೆಗಳನ್ನು ಜೂನ್‌ 5ರಿಂದ 30ರ ನಡುವೆ ಆರರಿಂದ ಎಂಟು ಹಂತಗಳಲ್ಲಿ ನಡೆಸಲಾಗುವುದು.

ಜುಲೈ 1ರಿಂದ ವಾರ್ಷಿಕ ಅಮರನಾಥ ಯಾತ್ರೆ ಆರಂಭವಾಗುವುದಕ್ಕೆ ಮುನ್ನ ಜಮ್ಮು ಕಾಶ್ಮೀರ ಚುನಾವಣೆಯನ್ನು ನಡೆಸುವ ಸಂದರ್ಭದಲ್ಲಿ ಸಾಕಷ್ಟು ಭದ್ರತಾ ಪಡೆಗಳನ್ನು ನಿಯೋಜಿಸಬೇಕೆಂಬ ಒಮ್ಮತದ ಅಭಿಪ್ರಾಯ ತಳೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next