Advertisement

ಜೇಮ್ಸ್ ಚಿತ್ರ ಬಿಡುಗಡೆ: ಶೋ‌ ಹೌಸ್ ಫುಲ್, ಗದಗದಲ್ಲಿ ಅಭಿಮಾನಿಗಳ ಸಂಭ್ರಮ

10:58 AM Mar 17, 2022 | Team Udayavani |

ಗದಗ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆಯಾಗಿದ್ದು, ನಗರದಲ್ಲಿ ಅಭಿಮಾನಿಗಳು ಹಾಲಿನ ಅಭಿಷೇಕ, ಪಟಾಕಿ ಸಿಡಿಸುವ ಮೂಲಕ ಚಿತ್ರಕ್ಕೆ ಶುಭ ಕೋರಿದರು.

Advertisement

ನಗರದ ವೆಂಕಟೇಶ ಮತ್ತು ಕೃಷ್ಣ ಚಿತ್ರಮಂದಿರಗಳಲ್ಲಿ ಜೇಮ್ಸ್ ತೆರೆ ಕಂಡಿದ್ದು, ಅಪ್ಪು ಜನ್ಮ‌ದಿನದಂದೇ ಅವರ ಕೊನೆಯ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ‌ ಅಭಿಮಾನಿಗಳಲ್ಲಿ ನೋವಿನ ನಡುವೆ ಸಂಭ್ರಮ ಮನೆ ಮಾಡಿದೆ.‌ ಜೇಮ್ಸ್ ಬಿಡುಗಡೆ ಹಿನ್ನೆಲೆಯಲ್ಲಿ ಉಭಯ ಚಿತ್ರಮಂದಿರಗಳ ಎದುರು ಜಮಾವಣೆ ಗೊಂಡಿರುವ ನೂರಾರು ಅಭಿಮಾನಿಗಳು ಅಪ್ಪು ಅವರ ಕಟೌಟ್ ಗೆ ಹಾಲಿನ ಅಭಿಷೇಕ ನೆರವೇರಿಸಿ ಅಭಿಮಾನ ಮೆರೆದರು.

ಅಭಿಮಾನಿಯೊಬ್ಬರು ಎದೆ ಮೇಲೆ ಹಾಕಿಸಿಕೊಂಡಿದ್ದ ಅಪ್ಪು ಭಾವಚಿತ್ರದ ಟ್ಯಾಟೋ, ಜೇಮ್ಸ್ ಟಿ ಶರ್ಟ್ ಧರಿಸಿ ಚಿತ್ರ ವೀಕ್ಷಣೆಗೆ ಆಗಮಿಸಿದ್ದ ಪ್ರೇಕ್ಷಕರು ಗಮನ‌ಸೆಳೆದರು.

ಇದನ್ನೂ ಓದಿ : “ಜೇಮ್ಸ್‌” ಆಗಿ ಬಂದ ಅಪ್ಪು; ಟಿಕೆಟ್ ಗಾಗಿ ನೂಕು ನುಗ್ಗಲು, ಅಭಿಮಾನಿಗಳ ಕಣ್ಣೀರು

Advertisement

3 ಶೋ ಹೌಸ್ ಫುಲ್
ಈ ಪೈಕಿ ವೆಂಕಟೇಶ ಟಾಕೀಸ್ ನಲ್ಲಿ ಒಟ್ಟು 600 ಆಸನಗಳಿದ್ದು, ಮೊದಲ ಮೂರು ಶೋಗಳಿಗೆ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇನ್ನುಳಿದಂತೆ ಶೋಗಳು ಮತ್ತು ಕೃಷ್ಣ ಚಿತ್ರಮಂದಿರದಲ್ಲಿ ಶೇ. 80 ಕ್ಕಿಂತ ಹೆಚ್ಚು ಟಿಕೆಟ್ ಗಳು ಆನ್ ಲೈನ್ ನಲ್ಲಿ ಬುಕ್ ಆಗಿವೆ ಎನ್ನುತ್ತಾರೆ ಚಿತ್ರಮಂದಿರಗಳ‌ ವ್ಯವಸ್ಥಾಪಕರು.

Advertisement

Udayavani is now on Telegram. Click here to join our channel and stay updated with the latest news.

Next